ಪಾಕಿಸ್ತಾನಕ್ಕೆ ʻಒಂದು ಹನಿ ನೀರುʼ ಕೂಡ ಹರಿಸಲ್ಲ; 3 ಅಂಶಗಳ ಕಾರ್ಯತಂತ್ರ ರೂಪಿಸಲು ಕೇಂದ್ರ ಸೂಚನೆ

Public TV
1 Min Read
Indus Water

ನವದೆಹಲಿ: ಪಹಲ್ಗಾಮ್‌ ದಾಳಿಯ ಬಳಿಕ ಪಾಕಿಸ್ತಾನದ (Pakistan) ವಿರುದ್ಧ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿರುವ ಭಾರತ ಇಂದು ಮಹತ್ವದ ನಿರ್ಣಯಕ್ಕೆ ಮುಂದಾಗಿದೆ. ಭಾರತದಿಂದ ನೆರೆಯ ಪಾಕ್‌ಗೆ ಒಂದು ಹನಿ ನೀರು ಹರಿಸದಂತೆ ಖಾತ್ರಿಪಡಿಸಿಕೊಳ್ಳಲು ಮೂರು ಹಂತದ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

india pakistan cricket bcci pcb

ಗೃಹ ಸಚಿವ ಅಮಿತ್ ಶಾ ಅವರು ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ ಮತ್ತು ಸಚಿವಾಲಯದ ಅಧಿಕಾರಿಗಳೊಂದಿಗೆ 1960ರ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸುವ ನಿರ್ಧಾರದ ಅನುಷ್ಠಾನ ಕುರಿತು ಸಭೆ ನಡೆಸಿದರು. ಈ ವೇಳೆ ಜಲಸಂಪನ್ಮೂಲ ಮತ್ತು ವಿದ್ಯುತ್ ಸಚಿವಾಲಯಗಳ ಅಧಿಕಾರಿಗಳಿಗೆ ಅಲ್ಪಾವಧಿ. ಮಧ್ಯಮಾವಧಿ ಮತ್ತು ದೀರ್ಘಾವಧಿಯ ಮೂರು ಅಂಶಗಳ ಕಾರ್ಯತಂತ್ರ ರೂಪಿಸಲು ಸೂಚಿಸಲಾಗಿದೆ. ಇದನ್ನೂ ಓದಿ: Pahalgam Attack | 11 ವರ್ಷದಿಂದ ದಿನದ 24 ಗಂಟೆ ಮುಸ್ಲಿಂ.. ಮುಸ್ಲಿಂ.. ಮುಸ್ಲಿಂ.. – ಕೇಂದ್ರದ ವಿರುದ್ಧ ಸಂತೋಷ್‌ ಲಾಡ್‌ ಸಿಡಿಮಿಡಿ

ʻಸಿಂಧೂ ನದಿಯ ಒಂದು ಹನಿ ನೀರುʼ (Indus Treaty water) ಕೂಡ ಪಾಕಿಸ್ತಾನಕ್ಕೆ ತಲುಪದಂತೆ ನೋಡಿಕೊಳ್ಳಲು ಸಭೆಯಲ್ಲಿ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಸರ್ಕಾರವು ಅಲ್ಪಾವಧಿಯ, ಮಧ್ಯಮ ಅವಧಿಯ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಇದರಿಂದಾಗಿ ಒಂದು ಹನಿ ನೀರು ಕೂಡ ಪಾಕಿಸ್ತಾನಕ್ಕೆ ಹೋಗದು ಎಂದು ಸಭೆಯ ನಂತರ ಸಚಿವ ಸಿ.ಆರ್. ಪಾಟೀಲ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಬಂಧ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ. ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಮಿತ್ ಶಾ ಅವರು ಸಭೆಯಲ್ಲಿ ಹಲವು ಸಲಹೆಗಳನ್ನು ನೀಡಿದ್ದಾರೆ. ಅದರಂತೆ ಪಾಕಿಸ್ತಾನಕ್ಕೆ ನೀರು ಹರಿಯದಂತೆ ತಡೆಯಲು ನದಿ ನೀರನ್ನು ಬೇರೆಡೆ ತಿರುಗಿಸಲು ಮತ್ತು ನದಿಗಳ ಹೂಳು ತೆಗೆಯುವಂತಹ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.  ಇದನ್ನೂ ಓದಿ: Pahalgam Attack | ನಿಮ್ಮ ಅವಧಿಯಲ್ಲಿ ಹಿಂದೂಗಳಿಗೆ ಅನ್ಯಾಯ ಆಯ್ತು ಅಂತ ಒಪ್ಪಿಕೊಳ್ಳಿ; ಕೇಂದ್ರದ ವಿರುದ್ಧ ಸಂತೋಷ್ ಲಾಡ್ ಕೆಂಡ

Share This Article