ನಾನು ಒಂದು ಧರ್ಮದ ಪರ ಅಲ್ಲ: ಸಿದ್ದರಾಮಯ್ಯ

Public TV
1 Min Read
Siddaramaiah 4

ಚಾಮರಾಜನಗರ: ನಾನು ಸಿಎಂ ಆಗಿರುವವರೆಗೆ ಎಲ್ಲಾ ವರ್ಗದ ಜನರ ಪರವಾಗಿ ಇರುತ್ತೇನೆ. ನಾನು ಒಂದು ಧರ್ಮದ ಪರವಾಗಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದರು.

ಕನಕಭವನದ ಗುದ್ದಲಿ ಪೂಜೆ ನೆರವೇರಿಸಿ, ವೇದಿಕೆಯಲ್ಲಿ ಮಾತನಾಡಿದ ಅವರು, ಇಂದು ಜಾತಿಗೆ ಅಂಟಿಕೊಂಡಿಲ್ಲ. ನಮ್ಮ ಜನರನ್ನು ಮರೆಯುವುದಿಲ್ಲ. ಸಮಾಜದಲ್ಲಿ ಒಂದು ಧರ್ಮ, ಜಾತಿಯಿಂದ ನ್ಯಾಯ ಕೊಡಲು ಸಾಧ್ಯವಿಲ್ಲ. ಎಲ್ಲರ ಬೆಂಬಲ ಹಾಗೂ ಸಹಕಾರ ಮುಖ್ಯವಾಗಿದೆ. ಇಡೀ ರಾಜ್ಯದಲ್ಲಿ ಅಹಿಂದ ವರ್ಗದ ಜನರು ಹಾಗೂ ಬಡವರು ಸಹಾಯ ಮಾಡಿದ್ದಾರೆ. ಸಿಎಂ ಆಗುವುದು ಅಷ್ಟು ಸುಲಭದ ಕೆಲಸವಲ್ಲ ಎಂದರು. ಇದನ್ನೂ ಓದಿ: ಕಾವೇರಿ ಆರತಿ ಅಧ್ಯಯನ ಸಮಿತಿ ಶಿಫಾರಸು ಜಾರಿಗೆ ಸಮಿತಿ ರಚನೆ

ಚಾಮರಾಜನಗರವು (Chamarajanagara) ಬಹಳ ಹಿಂದುಳಿದ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕಡಿಮೆ. ಶಿಕ್ಷಣಕ್ಕೆ ಆದ್ಯತೆ ಕೊಡಬೇಕಾಗಿದೆ. ಸಮುದಾಯ ಭವನದಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಭವನವನ್ನು ಮಾಡಬೇಕು. ಅಲ್ಲದೇ ಚಾಮರಾಜನಗರದ ಎಲ್ಲಾ ಅಹಿಂದ ವರ್ಗದ ಜನರು ಮುಖ್ಯ ವಾಹಿನಿಗೆ ಬರಬೇಕು. ಇದಕ್ಕೆ ಸರ್ಕಾರ ಅನೇಕ ಕಾರ್ಯಕ್ರಮ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಪಹಲ್ಗಾಮ್‌ಗೆ ರಾಹುಲ್ ಗಾಂಧಿ ಭೇಟಿ – ಉಗ್ರರ ದಾಳಿ ವೇಳೆ ಗಾಯಗೊಂಡವರ ಆರೋಗ್ಯ ವಿಚಾರಣೆ

ಶಕ್ತಿ ಯೋಜನೆಯಡಿ ಎಲ್ಲಾ ಜಾತಿಯ ಹೆಣ್ಣು ಮಕ್ಕಳು ಬಸ್‌ನಲ್ಲಿ ಉಚಿತವಾಗಿ ಓಡಾಡಬಹುದು. ಅದಕ್ಕೆ ಬಡತನ ಶ್ರೀಮಂತಿಕೆ ಇಲ್ಲ. ಎಲ್ಲಾ ಪಾರ್ಟಿ, ಧರ್ಮದ ಮಹಿಳೆಯರು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದರು.

Share This Article