ಚಂಡೀಗಢ: ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಅಚಾನಕ್ಕಾಗಿ ಗಡಿರೇಖೆ ದಾಟಿದ ಬಿಎಸ್‌ಎಫ್ ಜವಾನ್ (BSF Jawan) ಒಬ್ಬರನ್ನ ಪಾಕಿಸ್ತಾನ ರೇಂಜರ್‌ಗಳು (Pakistani Rangers) ಬಂಧಿಸಿದ್ದಾರೆ.
ಪಿ.ಕೆ ಸಿಂಗ್ ಬಂಧಿತ ಬಿಎಸ್‌ಎಫ್ ಯೋಧ. ಪಿಕೆ ಸಿಂಗ್ 182ನೇ ಬಿಎಸ್‌ಎಫ್ ಬೆಟಾಲಿಯನ್‌ನ ಕಾನ್‌ಸ್ಟೇಬಲ್ ಅಂತ ತಿಳಿದುಬಂದಿದೆ. ಯೋಧನ ಬಿಡುಗಡೆಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಬಿಎಸ್‌ಎಫ್ ಹಾಗೂ ಪಾಕ್ ರೇಂಜರ್‌ಗಳ ತುರ್ತು ಸಭೆ ಕರೆಯಲಾಗಿದೆ. ಇದನ್ನೂ ಓದಿ: ನೀರು ನಿಲ್ಲಿಸೋದು ಯುದ್ಧಕ್ಕೆ ಆಹ್ವಾನಿಸಿದಂತೆ – ಭಾರತದ ಪ್ರತೀಕಾರ ನಿರ್ಧಾರದಿಂದ ಕೋಪಗೊಂಡ ಪಾಕ್
ಭಾರತದ (India) ಪ್ರತೀಕಾರದ ಎಚ್ಚರಿಕೆ ಬೆನ್ನಲ್ಲೇ ಪಾಕ್‌ಗೆ ಆತಂಕ ಶುರುವಾಗಿದೆ. ಭಾರತದ ದಾಳಿ ಮಾಡಿದರೆ ನಾವೂ ಪ್ರತಿದಾಳಿ ಮಾಡ್ತೇವೆ ಅಂತ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾನೆ. ಅಲ್ಲದೇ, ಪಹಲ್ಗಾಮ್ ಉಗ್ರದಾಳಿಯಲ್ಲಿ ನಮ್ಮ ಕೈವಾಡ ಇಲ್ಲ. ಆರೋಪಕ್ಕೆ ಸಾಕ್ಷಿ ಕೊಡಿ ಅಂತ ವಿದೇಶಾಂಗ ಸಚಿವ ಹೇಳಿದ್ದಾರೆ. ಆದರೂ, ಭಾರತದಿಂದ ದಾಳಿ ಭೀತಿಯಲ್ಲಿ ಎಲ್‌ಒಸಿ ಬಳಿ ಸೈನಿಕರ ಸಂಖ್ಯೆ ಹೆಚ್ಚಿಸಿಕೊಂಡಿದೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ
ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ. ಸಿಂಧೂ ಜಲ ಒಪ್ಪಂದ ರದ್ದು ಯುದ್ಧಕ್ಕೆ ಸಮ. ನಾವೂ ಪ್ರತೀಕಾರಕ್ಕೆ ಸಿದ್ಧ ಅಂತ ಪಾಕಿಸ್ತಾನ ಹೇಳಿದೆ. ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ ಅಂತ ತಿಳಿದು ಬಂದಿದೆ. ವ್ಯಕ್ತಿಯೋರ್ವ ಕೇಕ್ ಒಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಪಹಲ್ಗಾಮ್ ಪೈಶಾಚಿಕ ದಾಳಿಯ ಹಿಂದೆ ಪಾಕಿಸ್ಥಾನದ ಕೈವಾಡ ಇದೆ ಅಂತ ಪಾಕ್ ಕ್ರಿಕೆಟಿಗ ದಾನಿಶ್ ಕನೇರಿಯಾ ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ, ನಾನೊಬ್ಬ ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗುತ್ತಿದೆ ಎಂದು ದಾಳಿಯನ್ನು ಬಾಲಿವುಡ್ ಗಾಯಕ ಸಲೀಂ ಮರ್ಚೆಂಟ್ ಖಂಡಿಸಿದ್ದಾರೆ. ಇದನ್ನೂ ಓದಿ: Pahalgam Terrorist Attack | ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಶುರು – ರಾಹುಲ್, ಖರ್ಗೆ ಭಾಗಿ