ನಟ ಶಿವರಾಜ್‌ಕುಮಾರ್ (Shivarajkumar) ಆರೋಗ್ಯದಲ್ಲಿ ಚೇತರಿಕೆ ಕಂಡಿರೋ ಹಿನ್ನೆಲೆ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳು ಇರೋ ನಡುವೆ ನವನಿರ್ದೇಶಕನ ಚಿತ್ರಕ್ಕೆ ಶಿವಣ್ಣ ಕೈಜೋಡಿಸಿದ್ದಾರೆ. ಇಂದು (ಏ.24) ಅಣ್ಣಾವ್ರ ಹುಟ್ಟುಹಬ್ಬದ ಹಿನ್ನೆಲೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ನಾನು ಪಾಕಿಸ್ತಾನದವಳಲ್ಲ: ದ್ವೇಷ ಕಾರಿದವರಿಗೆ ನಟಿ ಇಮಾನ್ವಿ ಸ್ಪಷ್ಟನೆ
ಶ್ರೀತಿಕ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ ಖ್ಯಾತ ನಿರ್ಮಾಪಕ ಪಿ.ವಾಸು ಸೋದರಳಿಯ ಬಾಲಾಜಿ ಮಾಧವನ್ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಬಾಲಾಜಿ ಅವರು ವಿಭಿನ್ನವಾಗಿರೋ ಕಥೆಯನ್ನೇ ಬರೆದಿದ್ದಾರೆ. ಹಾಗಾಗಿ ಶಿವಣ್ಣ ಮೆಚ್ಚಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸದ್ಯದಲ್ಲೇ ಪಾತ್ರವರ್ಗ ಮತ್ತು ಚಿತ್ರದ ಟೈಟಲ್ ಅನಾವರಣ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಇದನ್ನೂ ಓದಿ:ಪಾಕ್ ನಟನ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಬಹಿಷ್ಕಾರ
ಅಂದಹಾಗೆ, ರಾಮ್ ಚರಣ್ ಜೊತೆಗಿನ ತೆಲುಗು ಸಿನಿಮಾ, ‘ಜೈಲರ್ 2’, ‘ಗೂಗ್ಲಿ’ ಡೈರೆಕ್ಟರ್ ಪವನ್ ಒಡೆಯರ್ ಜೊತೆಗಿನ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಶಿವಣ್ಣ ಕೈಯಲ್ಲಿವೆ.