– ನಾವೆಲ್ಲರೂ ನಿದ್ರಾವಸ್ಥೆಯಿಂದ ಎಚ್ಚೆತ್ತು ಮೇಲ್ಬರಬೇಕು; ಶ್ರೀಗಳ ಕರೆ
ರಾಯಚೂರು: ಪಹಲ್ಗಾಮ್‌ನಲ್ಲಿ (Pahalgam) ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟ ರಾಜ್ಯದ ಮೂವರ ಕುಟುಂಬಕ್ಕೆ ಮಠದಿಂದ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಪಹಲ್ಗಾಮ್ ದಾಳಿಯ ಕುರಿತು ಮಾತನಾಡಿದ ಅವರು, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಹತ್ಯೆಯನ್ನ ತೀವ್ರವಾಗಿ ಖಂಡಿಸುತ್ತೇವೆ. ನಾವೆಲ್ಲಾ ಭಾರತೀಯರು ಶಾಂತಿ ಪ್ರಿಯರು. ನಮ್ಮ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಸಮುದಾಯದವರು ಒಂದೇ ತಾಯಿ ಮಕ್ಕಳು. ನಾವೆಲ್ಲರೂ ಒಂದೇ ನಮ್ಮಲ್ಲಿ ಬೇಧ ಭಾವನೆ ಇಲ್ಲ. ಆದರೆ ಬೇರೆ ದೇಶದವರು, ಉಗ್ರರು ಬಂದು ನಮ್ಮಲ್ಲಿ ಒಡೆದಾಳುವ ನೀತಿ ಮಾಡಿ ಜಾತಿ, ಕೋಮು ಗಲಭೆ ಸೃಷ್ಟಿಸುವ ಮೂಲಕ ಅಶಾಂತಿ ಉಂಟುಮಾಡುವ ದುಷ್ಟ ಕೃತ್ಯ ಮಾಡುತ್ತಿದ್ದಾರೆ. ಇಂಥಹ ಉಗ್ರರನ್ನ ನಾವೆಲ್ಲಾ ಸಂಘಟಿತರಾಗಿ ಎದುರಿಸಬೇಕು ಎಂದು ಕರೆ ನೀಡುತ್ತೇವೆ ಎಂದರು. ಇದನ್ನೂ ಓದಿ: Pahalgam Terrorist Attack | ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಶುರು – ರಾಹುಲ್, ಖರ್ಗೆ ಭಾಗಿ
ನಮ್ಮ ಮಹಿಳೆಯರನ್ನ ರಕ್ಷಣೆ ಮಾಡಬೇಕು. ನಮ್ಮ ಧರ್ಮ, ದೇವಸ್ಥಾನ, ಮಠಮಾನ್ಯ ಶ್ರದ್ಧಾಕೇಂದ್ರಗಳನ್ನ ರಕ್ಷಣೆ ಮಾಡಬೇಕು. ನಿದ್ರಾವಸ್ಥೆಯಿಂದ ಎಚ್ಚೆತ್ತು ಮೇಲ್ಬರಬೇಕು. ಕಾಶ್ಮೀರದಲ್ಲಿ ನಡೆದ ಘಟನೆ ಎಲ್ಲಾದರೂ ನಡೆಯಬಹುದು. ಯಾರೂ ಎಚ್ಚರ ತಪ್ಪಿ ಇರಬಾರದು ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ದಿನವೇ ಗೌತಮ್ ಗಂಭೀರ್‌ಗೆ ಜೀವ ಬೆದರಿಕೆ
ಮೃತರ ಕುಟುಂಬಗಳಿಗೆ ನೈತಿಕ ಬೆಂಬಲದ ಅವಶ್ಯಕತೆಯಿದೆ. ಈ ದುಷ್ಕೃತ್ಯದ ಕಾರಣಕರ್ತರನ್ನ ಸರ್ಕಾರಗಳು ಅನ್ವೇಷಣೆ ಮಾಡಿ ಸೂಕ್ತ ಶಿಕ್ಷೆಗೆ ಒಳಪಡಿಸಬೇಕು. ಅಶಾಂತಿ ಕದಡದಂತೆ ದೇಶದಲ್ಲಿ ಭದ್ರತೆ, ಜಾಗ್ರತೆ ವಹಿಸಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಕಾಶ್ಮೀರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು.