– ಪುಟ್ಟ ಮಗುವನ್ನು ಎದೆಗವುಚಿ ಪತ್ನಿ ಭಾವುಕ ವಿದಾಯ
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ (Pahalgam) ಭಯೋತ್ಪಾದಕರ ದಾಳಿಗೆ ಬಲಿಯಾದ ಕನ್ನಡಿಗ ಭರತ್ ಭೂಷಣ್ ಅಂತ್ಯಕ್ರಿಯೆ ಹೆಬ್ಬಾಳ (Hebbal) ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಪತಿಯನ್ನು ಕಳೆದುಕೊಂಡ ಭರತ್ ಭೂಷಣ್ ಪತ್ನಿ ಪುಟ್ಟ ಮಗುವನ್ನು ಎದೆಗವುಚಿಕೊಂಡು ಭಾವುಕ ವಿದಾಯ ಹೇಳಿದ್ದಾರೆ.
ಮತ್ತಿಕೇರಿ ನಿವಾಸದ ಬಳಿ ಕುಟುಂಬದ ಸದಸ್ಯರಿಂದ ದಿ. ಭರತ್ ಭೂಷಣ್ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ ಸಲ್ಲಿಸಿದರು. ರಾಜ್ಯಪಾಲರು, ಸಿಎಂ, ಹಿರಿಯ ಅಧಿಕಾರಿಗಳು ಸೇರಿದಂತೆ ರಾಜಕಾರಿಗಳು ಅಂತಿಮ ದರ್ಶನ ಪಡೆದರು.ಇದನ್ನೂ ಓದಿ: ಏ.27ರೊಳಗೆ ಭಾರತ ಬಿಟ್ಟು ತೊಲಗಿ – ಪಾಕ್ ಪ್ರಜೆಗಳಿಗೆ ಭಾರತ ಖಡಕ್ ವಾರ್ನಿಂಗ್
ಅಂತಿಮ ಪೂಜೆ ಬಳಿಕ ಸಿಗ್ನಲ್ ಫ್ರೀಯಲ್ಲಿ ಪಾರ್ಥಿವ ಶರೀರವನ್ನು ಹೆಬ್ಬಾಳ ಚಿತಾಗಾರಕ್ಕೆ ರವಾನಿಸಲಾಯಿತು. ಮೂರು ಸುತ್ತು ಕುಶಾಲತೋಪು ಸಿಡಿಸಿ, ಕುಟುಂಬದವರ ಸಮ್ಮುಖದಲ್ಲಿ ಗೌರವ ಸಲ್ಲಿಸಲಾಯಿತು. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಭರತ್ ಭೂಷಣ್ ಅವರು ಪತ್ನಿ ಹಾಗೂ ಮಗುವಿನೊಂದಿಗೆ ಜಮ್ಮು ಕಾಶ್ಮೀರ ಪ್ರವಾಸಕ್ಕೆಂದು ತೆರಳಿದ್ದರು. ಏ.22 ರಂದು ಜಮ್ಮು ಕಾಶ್ಮೀರದ ಪಹಗ್ಲಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಭರತ್ ಭೂಷಣ್ ಬಲಿಯಾದರು.ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಮಂಜುನಾಥ್ ಅಂತ್ಯಕ್ರಿಯೆ