ಮಂಡ್ಯ: ಬಸ್ ನಿಲ್ಲಿಸದೇ ಇದ್ದಕ್ಕೆ ಕಲ್ಲೆಸೆದು ಅನ್ಯಕೋಮಿಯನ ಯುವಕರು ದಾಂಧಲೆ ನಡೆಸಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಗಂಜಾಂ ರಸ್ತೆಯಲ್ಲಿ ನಡೆದಿದೆ.
ಸರ್ಕಾರಿ ಬಸ್ (Government Bus) ಮೇಲೆ ಅನ್ಯಕೋಮಿನ ಯುವಕರ ಗುಂಪು ಕಲ್ಲು ತೂರಾಟ ನಡೆಸಿದ್ದು, ಬಳಿಕ ಯುವಕರನ್ನು ಹಿಡಿದು ಥಳಿಸಿದ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ | ಕೂಡಲೇ ಪಾಕ್ ತೊರೆಯಿರಿ ಭಾರತೀಯರಿಗೆ ಕೇಂದ್ರ ಸೂಚನೆ
ಏನಿದು ಘಟನೆ?
ಬಸ್ಸೊಂದು ಶ್ರೀರಂಗಪಟ್ಟಣದಿಂದ ಗಂಜಾಂಗೆ ತೆರಳುತ್ತಿತ್ತು. ಈ ವೇಳೆ ಮೈಸೂರಿಗೆ ಹೋಗುವ ಬಸ್ ಬದಲು, ಅನ್ಯಕೋಮಿನ ಯುವಕರ ಕುಟುಂಬ ಗಂಜಾಂಗೆ ತೆರಳುತ್ತಿದ್ದ ಬಸ್ ಹತ್ತಿದೆ. ಕಂಡಕ್ಟರ್ ಬಳಿ ನಾವು ಮೈಸೂರಿಗೆ ಹೋಗಬೇಕು ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದು ಮೈಸೂರಿನ ಬಸ್ ಅಲ್ಲ ಎಂದು ನಿರ್ವಾಹಕ ಹೇಳ್ತಿದ್ದಂತೆ ಬಸ್ ನಿಲ್ಲಿಸುವಂತೆ ವಾಗ್ವಾದಕ್ಕಿಳಿದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ – ಪಾಕ್ ಉಗ್ರರ ಮಾಹಿತಿ ಕೊಟ್ಟವರಿಗೆ 20 ಲಕ್ಷ ಬಹುಮಾನ ಘೋಷಣೆ
ಆಗ ಕಂಡಕ್ಟರ್ ಇಲ್ಲಿ ಸ್ಟಾಪ್ ಇಲ್ಲ, ಮುಂದೆ ನಿಲ್ಲಿಸೋದಾಗಿ ಹೇಳಿದ್ದಾರೆ. ಅಷ್ಟಕ್ಕೆ ಡ್ರೈವರ್, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ದರ್ಪ ತೋರಿದ್ದಾರೆ. ಕೊನೆಗೆ ಬಸ್ ನಿಲ್ಲಿಸುತ್ತಿದ್ದಂತೆ ಕೆಳಗಿಳಿದ ಯುವಕರು ಬಸ್ ಮೇಲೆ ಕಲ್ಲೆಸೆದು, ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ನಂತರ ಕಲ್ಲೆಸೆದ ಅನ್ಯಕೋಮಿನ ಯುವಕರನ್ನ ಹಿಡಿದು ಥಳಿಸಿರುವ ಸಹ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. ಇದನ್ನೂ ಓದಿ: ‘ಮ್ಯಾಕ್ಸ್’ ಖ್ಯಾತಿಯ ಶ್ರೀಧರ್‌ಗೆ ಅನಾರೋಗ್ಯ- ಚಿಕಿತ್ಸೆಗೆ ಸಹಾಯ ಕೋರಿದ ನಟ