ಕಾಶ್ಮೀರದಲ್ಲಿ ಉಗ್ರರು, ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ – ಯೋಧ ಹುತಾತ್ಮ

Public TV
2 Min Read
INDIAN ARMY

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ (Indan Army) ನಡುವೆ ನಡೆದ ಗುಡಿನ ಚಕಮಕಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ದುಡು-ಬಸಂತ್‌ಗಢ ಪ್ರದೇಶದಲ್ಲಿ ಈ ಎನ್‌ಕೌಂಟರ್‌ (Encounter) ನಡೆದಿದೆ.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ (Pahalgam Terror Attack) ಎರಡು ದಿನಗಳ ನಂತರ ಈ ಎನ್‌ಕೌಂಟರ್ ನಡೆದಿದೆ. ಉಗ್ರರ ದಾಳಿಯಲ್ಲಿ ನೌಕಾಪಡೆಯ ಅಧಿಕಾರಿ, ವಾಯುಪಡೆಯ ಸಿಬ್ಬಂದಿ, ಗುಪ್ತಚರ ಬ್ಯೂರೋದ ಸಿಬ್ಬಂದಿ ಹಾಗೂ ಕರ್ನಾಟಕದ ಮೂವರು ಸೇರಿದಂತೆ 26 ಮಂದಿ ಸಾವಿಗೀಡಾಗಿದ್ದರು. ಇದನ್ನೂ ಓದಿ: ಪಹಲ್ಗಾಮ್ ದಾಳಿ – ಭಾರತದಲ್ಲಿ ಪಾಕ್‌ನ X ಖಾತೆ ಬಂದ್‌

ಉಗ್ರರ ದಾಳಿಯ ಬಗ್ಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಭದ್ರತೆಯ ಕುರಿತಾದ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆಸಲಾಯಿತು. ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪಾಕಿಸ್ತಾನದ ಸಂಪರ್ಕ ಇರುವುದರಿಂದ, ಭಾರತವು ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಕ್ರಮಕೈಗೊಂಡಿದೆ. ಪಾಕಿಸ್ತಾನಿ ನಾಗರಿಕರಿಗೆ ನೀಡಲಾದ ಯಾವುದೇ ಅಸ್ತಿತ್ವದಲ್ಲಿರುವ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಪಾಕ್‌ ಪ್ರಜೆಗಳಿಗೆ ಸೂಚಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ-ವಾಘಾ ಗಡಿ ಚೆಕ್‌ಪೋಸ್ಟ್‌ನ್ನು  (Attari Border) ತಕ್ಷಣದಿಂದ ಮುಚ್ಚಲು ಆದೇಶಿಸಲಾಗಿದೆ.

ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ತ್ಯಜಿಸುವವರೆಗೆ 1960ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳ್ಳುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ತಿಳಿಸಿದ್ದರು. ಈಗ ಪಾಕ್‌ ಸರ್ಕಾರದ ಎಕ್ಸ್‌ ಖಾತೆಯನ್ನು ಸಹ ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಭೀಕರ ಕರಾಳತೆ ನೆನಪಿಸುವ ಪಹಲ್ಗಾಮ್ ಅಟ್ಯಾಕ್- ವಿಶ್ವ ನಾಯಕರ ಭೇಟಿ ಹೊತ್ತಲ್ಲೇ ದಾಳಿ ಏಕೆ?

Share This Article