ಬೆಂಗಳೂರು: ಕೇಂದ್ರ ಸರ್ಕಾರದ ಜೊತೆ ನಾವಿದ್ದೇವೆ. ಎಲ್ಲಾ ಉಗ್ರ ತಾಣಗಳನ್ನು ನಾಶಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ (Pahalgam Terrorist Attack) ಬಲಿಯಾದ ಮತ್ತಿಕೆರೆಯ ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸರ್ಕಾರದ ಪರವಾಗಿ ಕನ್ನಡ ನಾಡಿನ ಏಳು ಕೋಟಿ ಜನರ ಪರವಾಗಿ ಭರತ್ ಭೂಷಣ್‌ಗೆ ಶ್ರದ್ದಾಂಜಲಿ ಸಲ್ಲಿಸಿದ್ದೇನೆ. ಇನ್ನೂ ಚಿಕ್ಕ ವಯಸ್ಸು. ಭರತ್ ಭೂಷಣ್ ಬಿಇ ಎಂಬಿಎ ಮಾಡಿದ್ದಾರೆ. ಉಗ್ರರು ಅಮಾನವೀಯವಾಗಿ ಕೃತ್ಯ ಎಸಗಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಿದ್ದೇನೆ. ಉಗ್ರ ಚಟುವಟಿಕೆಗಳು ಈ ದೇಶದಿಂದ ಹೋಗಬೇಕು. ಯಾವುದೇ ಕಾರಣಕ್ಕೂ ಸರ್ಕಾರ ಕನಿಕರ ತೋರಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥ ಮುನೀರ್ ಉಗ್ರ – ಲಾಡೆನ್‌ನಂತೆ ಈತನ ಅಂತ್ಯವಾಗಬೇಕು: ಪೆಂಟಗನ್ ಮಾಜಿ ಅಧಿಕಾರಿ
ಹಾಡಹಗಲೇ ಹೆಂಡತಿ, ಮಗು ಇದ್ದಾಗಲೆ ಶೂಟ್ ಮಾಡೋದಕ್ಕಿಂತ ಹೇಯಕೃತ್ಯ ಇನ್ನೊಂದಿಲ್ಲ. ಮನುಷ್ಯತ್ವ ಇಲ್ಲದವರು ಅವರು. ಇದನ್ನು ಖಂಡಿಸುತ್ತೇನೆ. ಇದೇ ಜಿಲ್ಲೆಯಲ್ಲಿ ಪುಲ್ವಾಮ ಅಟ್ಯಾಕ್ ಆಯಿತು. ಘಟನೆಯಲ್ಲಿ 40 ಸೈನಿಕರು ಸಾವನ್ನಪ್ಪಿದ್ದರು. ಅಲ್ಲೇ ಇದೀಗ ಮತ್ತೆ ಮರುಕಳಿಸಿದೆ. ಅವರು ಎಲ್ಲೇ ಇದ್ದರೂ ಪತ್ತೆ ಹಚ್ಚಿ ನಿರ್ಮೂಲನೆ ಮಾಡಬೇಕು. ಬಹುಷಃ ಎಲ್ಲೋ ಒಂದು ಕಡೆ ಇಂಟೆಲಿಜೆನ್ಸ್ ಫೇಲ್ಯೂರ್ ಆಗಿದೆ ಅನ್ನಿಸುತ್ತಿದೆ ಎಂದರು. ಇದನ್ನೂ ಓದಿ: ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ಅನ್ಯ ಕೋಮಿನ ಯುವಕರಿಂದ ಆರ್‌ಎಸ್ಎಸ್ ಮುಖಂಡ, ಕುಟುಂಬದ ಮೇಲೆ ಹಲ್ಲೆ
ಸತ್ತವರ ಕುಟುಂಬಗಳಿಗೆ ನಮ್ಮ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಿದೆ. ಯಾವಾಗಲೂ ನಮ್ಮ ಸರ್ಕಾರ ಕುಟುಂಬದ ಜೊತೆ ಇದೆ. ಸಚಿವ ಸಂತೋಷ್ ಲಾಡ್ ಅವರನ್ನು ಕೂಡಲೇ ಕಾಶ್ಮೀರಕ್ಕೆ ಕಳುಹಿಸಿದ್ದೆ. ಮೃತದೇಹಗಳು ಹಾಗೂ ಕನ್ನಡಿಗರನ್ನು ವಾಪಸ್ ಕರೆತರುವಂತೆ ತಿಳಿಸಿದ್ದೆ. 177 ಜನರನ್ನು ಲಾಡ್ ವಾಪಸ್ ಕರೆತರುತ್ತಿದ್ದಾರೆ. ಇನ್ನೊಂದು ಸಾರಿ ಉಗ್ರ ಕೃತ್ಯ ಮರುಕಳಿಸದೆ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: Pahalgam Terror Attack: ಶಿವಮೊಗ್ಗ ತಲುಪಿದ ಮಂಜುನಾಥ್ ಮೃತದೇಹ