ಬೆಂಗಳೂರು: ಜಾತಿ ಜನಗಣತಿ ವರದಿ (Caste Census Report) ಕುರಿತು ಸಮಗ್ರ ಚರ್ಚೆಗೆ ಸರ್ಕಾರ ವಿಧಾನಮಂಡಲ ಅಧಿವೇಶನ ಕರೆಯಲಿ ಎಂದು ಪರಿಷತ್ ಸದಸ್ಯ ಸಿ ಟಿ ರವಿ (C.T. Ravi) ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ಅವರು, ಮುಖ್ಯಮಂತ್ರಿಗಳು ಅವರ ಸಂಪುಟದ ಸದಸ್ಯರಿಗೇ ಸಮಾಧಾನ ಪಡಿಸಲು ಆಗಿಲ್ಲ. ನಿಮ್ಮ ಶಾಸಕರಿಗೇ ವರದಿ ಬಗ್ಗೆ ಒಪ್ಪಿಸಲು ಆಗಿಲ್ಲ. ಇನ್ನೂ ರಾಜ್ಯದ ಜನರಿಗೆ ಹೇಗೆ ಒಪ್ಪಿಸ್ತೀರಾ ಎಂದು ಪ್ರಶ್ನಿಸಿದರು. ಮೂಲ ವರದಿಯೇ ಇಲ್ಲ, ಸದಸ್ಯ ಕಾರ್ಯದರ್ಶಿ ಅವರೇ ಆ ಸಮೀಕ್ಷೆಗೆ ಸಹಿ ಹಾಕಿಲ್ಲ. ಅದಕ್ಕೆ ಹೇಗೆ ಮಾನ್ಯತೆ ಸಿಗುತ್ತೆ? ವರದಿಯಲ್ಲಿ ವ್ಯತ್ಯಾಸಗಳು ಬಹಳ ಇವೆ. ಕೆಲವು ಸಮುದಾಯಗಳ ಸಂಖ್ಯೆ ಹೆಚ್ಚಾಗಿದೆ, ಕೆಲವರದ್ದು ಕಡಿಮೆ ಆಗಿದೆ. ಇದನ್ನು ಹೇಗೆ ಸರಿಪಡಿಸ್ತೀರಿ? ಸಮೀಕ್ಷೆ ಸರಿಯಾಗಿ ಆಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿಗರಿಂದ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ, ಇದು ಜಾಹೀರಾತಿನ ಸರ್ಕಾರ: ಬಿವೈವಿ
ರಾಜ್ಯದ ನಂಬರ್ ಒನ್ ಜನಸಂಖ್ಯೆ ಮುಸ್ಲಿಂ ಅಂತ ಹೇಳಿದ್ದಾರೆ. ಹಾಗಾದರೆ ಅವ್ರು ಹೇಗೆ ಮೈನಾರಿಟಿ ಆಗ್ತಾರೆ? ಅವರು ಬಹುಸಂಖ್ಯಾತರು, ಅವರನ್ನು ಅಲ್ಪಸಂಖ್ಯಾತ ಮಾನ್ಯತೆಯಿಂದ ತೆಗೆಯಿರಿ. ನಿಮ್ಮ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿ. ಎಲ್ಲೆಲ್ಲಿ ಸಮೀಕ್ಷೆ ಹೋಗಿದ್ರು? ವರದಿ ಎಷ್ಟು ವೈಜ್ಞಾನಿಕ ಎಂದು ಚರ್ಚೆಯಾಗಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: Pahalgam Attack | ದೆಹಲಿ, ಮುಂಬೈ ಪ್ರವಾಸಿ ತಾಣಗಳ ಮೇಲೂ ನಿಗಾ, ಬುಧವಾರ ಜಮ್ಮು ಬಂದ್‌ಗೆ ಕರೆ