ಬೆಂಗಳೂರು: ಯಾವ ಜಾತಿ ಅಂತ ಒಂದು ಕಡೆ ಕುಳಿತು ಜಾತಿಗಣತಿ (Caste Census) ಮಾಡಿದ್ದಾರೆ, ಅಂಗನವಾಡಿ ಟೀಚರ್‌ಗಳ ಮೂಲಕ ಸರ್ವೇ ಮಾಡಿಸಿದ್ದಾರೆ. ಯಾವತ್ತು ಸರ್ವೇ ಮಾಡಿದ್ದರೋ ನಾನು ಅವತ್ತೇ ವಿರೋಧ ಮಾಡಿದ್ದೆ ಎಂದು ಕಾಂಗ್ರೆಸ್ (Congress) ಶಾಸಕ ಲಕ್ಷ್ಮಣ್ ಸವದಿ (Laxman Savadi) ಹೇಳಿದರು.ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜಾಮೀನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮೇ 14ಕ್ಕೆ ಮುಂದೂಡಿಕೆ
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಅದೇನೋ ಈ ಹಿಂದೆ ಸರ್ವೇ ಮಾಡೋದಕ್ಕೆ ಜಿಲ್ಲಾವಾರು ಟೆಂಡರ್ ಕೊಟ್ಟಿದ್ದರು. ಆ ಟೆಂಡರ್ ತೆಗೆದುಕೊಂಡವರು ಸರಿಯಾದ ನಿಟ್ಟಿನಲ್ಲಿ ಸರ್ವೇ ಮಾಡಿಲ್ಲ. ಇವರು ಯಾವ ಜಾತಿ ಅಂತ ಒಂದು ಕಡೆ ಕುಳಿತುಕೊಂಡು ಮಾಡಿದ್ದಾರೆ. ಕೆಲವೊಂದು ಮನೆಗಳಿಗೆ ಹೋಗಿದ್ದಾರೆ ಅಷ್ಟೇ ಎಂದರು.
ಲಿಂಗಾಯತರು, ವೀರಶೈವ ಲಿಂಗಾಯತರು ಅಂತಿದೆ. ಈ ವೀರಶೈವ ಲಿಂಗಾಯತರಲ್ಲಿ ಬಹಳ ಉಪಜಾತಿಗಳಿವೆ ಅಂದಿದ್ದರು. ಜಾತಿ ಜನಗಣತಿ ವರದಿ ಶಾಸಕರ ಕೈ ಸೇರಿಲ್ಲ. ಸಚಿವರಿಗೆ ಒಂದೊಂದು ಕಾಪಿ ಸಿಕ್ಕಿದೆ, ಅವರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಶಾಸಕರ ಕೈಗೆ ಪ್ರತಿ ಸಿಕ್ಕಿದ ಮೇಲೆ ಸರಿ, ತಪ್ಪು ಪರಾಮರ್ಶೆ ಮಾಡುತ್ತೇವೆ. ನಮ್ಮ ಕ್ಷೇತ್ರದಲ್ಲಿ ಯಾವ ಜನಸಂಖ್ಯೆ ಎಷ್ಟಿದೆ? ಎಂದು ನಮಗೆ ಗೊತ್ತಿರುತ್ತದೆ. ಚುನಾವಣೆಗಳನ್ನು ಮಾಡಿರುತ್ತೇವೆ, ಮನೆ ಮನೆಗೆ ಹೋಗಿರುತ್ತೇವೆ. ಯಾರು ಯಾವ ಜಾತಿ ಎನ್ನುವ ಸಂಪೂರ್ಣ ಮಾಹಿತಿ ಶಾಸಕರಿಗೆ ಇರುತ್ತದೆ. ಜಾತಿ ಜನಗಣತಿ ವರದಿ ಕೈಗೆ ಬಂದರೆ, ಹೋಲಿಕೆ ಮಾಡಿ ನೋಡುತ್ತೇವೆ. ಪ್ರತಿಯೊಬ್ಬ ಶಾಸಕರಿಗೂ ಒಂದೊಂದು ಜಾತಿಗಣತಿ ವರದಿ ಪ್ರತಿ ಕೊಡಬೇಕೆಂದು ಒತ್ತಾಯಿಸಿದರು.ಇದನ್ನೂ ಓದಿ: ಜಾತಿ ಜನಗಣತಿ ಮರು ಸಮೀಕ್ಷೆ ಆಗ್ಬೇಕು, ಆದ್ರೆ ವಿಪಕ್ಷದವ್ರು ಚಿಲ್ಲರೆ ರೀತಿ ಮಾತಾಡಬಾರದು: ಮಾಗಡಿ ಬಾಲಕೃಷ್ಣ