ಓಂ ಪ್ರಕಾಶ್ ಹತ್ಯೆ ಕೇಸ್‌ – ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರಾ ಪತ್ನಿ ಪಲ್ಲವಿ?

Public TV
2 Min Read
om prakash EX IPS officer

ಬೆಂಗಳೂರು: ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್‌ (68) (Om Prakash) ಅವರನ್ನು ಹತ್ಯೆ ಮಾಡಿರುವ ಆರೋಪದಲ್ಲಿ ಜೈಲು ಸೇರಿರುವ ಅವರ ಪತ್ನಿ ಪಲ್ಲವಿ ಮಾನಸಿಕ ಸಮಸ್ಯೆ ಸ್ಕಿಜೋಫ್ರೇನಿಯಾದಿಂದ (Schizophrenia) ಬಳಲುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಪಲ್ಲವಿಯವರು ಪತಿ ವಿರುದ್ಧ ಮಾಡಿರುವ ಆರೋಪ ಈ ಅನುಮಾನಗಳಿಗೆ ಕಾರಣವಾಗಿದೆ.

ಏನಿದು ಸ್ಕಿಜೋಫ್ರೇನಿಯಾ?
ಸ್ಕಿಜೋಫ್ರೇನಿಯಾ ಮೆದುಳಿನಲ್ಲಿ ಹಾರ್ಮೋನ್ ವ್ಯತ್ಯಾಸದಿಂದ ಬರುವ ಕಾಯಿಲೆಯಾಗಿದ್ದು, ತೀವ್ರವಾದ ಮಾನಸಿಕ ಅಸ್ವಸ್ಥತೆಯಾಗಿದೆ.

ಸ್ಕಿಜೋಫ್ರೇನಿಯಾ ಲಕ್ಷಣಗಳೇನು?
ಈ ಕಾಯಿಲೆಗೆ ತುತ್ತಾದವರು ಸದಾ ಯಾರೋ ತನ್ನನ್ನು ಹಿಂಬಾಲಿಸುತ್ತಾರೆ ಎನ್ನುವ ಭ್ರಮೆಯಲ್ಲಿರುತ್ತಾರೆ. ಇತರರರಿಗೆ ಕೇಳದ ಶಬ್ದ, ವ್ಯಕ್ತಿಗಳು ರೋಗಿಗೆ ಕಾಣಿಸಿದಂತೆ ಬಾಸವಾಗುತ್ತದೆ. ಅನುಮಾನ ಪೀಡಿತ ಧೋರಣೆ, ಗೊಂದಲಮಯವಾಗಿರೋದು, ಸ್ವಚ್ಛತೆ ಕಾಪಾಡಿಕೊಳ್ಳದೇ ಇರೋದು. ಕೆಲವರು ಸದಾ ಒಂಟಿಯಾಗಿಯೇ ಇರುತ್ತಾರೆ. ಯಾರ ಮೇಲೆಯೂ ನಂಬಿಕೆ ಇಲ್ಲದಿರುವುದು. ಇದೆಲ್ಲ ಸ್ಕಿಜೋಪ್ರೇನಿಯಾ ರೋಗದ ಪ್ರಮುಖ ಲಕ್ಷಣವಾಗಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ, ಕಾಯಿಲೆ ಗುಣಪಡಿಸಲು ಸಾಧ್ಯವಿದೆ. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

ಏನಿದು ಓಂ ಪ್ರಕಾಶ್ ಹತ್ಯೆ ಕೇಸ್‌?
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರನ್ನು ಹೆಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಪತ್ನಿ ಪಲ್ಲವಿ ಚಾಕುವಿನಿಂದ 8-10 ಬಾರಿ ಎದೆ, ಹೊಟ್ಟೆ ಭಾಗಕ್ಕೆ ಇರಿದು ಕೊಲೆಗೈದಿದ್ದರು. ಈ ವೇಳೆ, ಸುಮಾರು 10-15 ನಿಮಿಷ ರಕ್ತದ ಮಡುವಿನಲ್ಲಿ ಓಂ ಪ್ರಕಾಶ್ ಒದ್ದಾಡಿ ಪ್ರಾಣ ಬಿಟ್ಟಿದ್ದರು. ಗಂಡನ ನರಳಾಟವನ್ನು ಪತ್ನಿ ನೋಡುತ್ತಾ ನಿಂತಿದ್ದರು ಎನ್ನಲಾಗಿದೆ.

ವಾರದ ಹಿಂದೆ ಐಪಿಎಸ್‌ ಅಧಿಕಾರಿಗಳಿಗೆ ಪಲ್ಲವಿ ಮೆಸೇಜ್‌ ಮಾಡಿದ್ದರು. ನನಗೆ ಮತ್ತು ಮಗಳಿಗೆ ಸಾಕಷ್ಟು ಹಿಂಸೆ ನೀಡುತ್ತಿದ್ದಾರೆ ಎಂದು ಪತಿಯನ್ನು ದೂರಿದ್ದರು. ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಗನ್‌ ಹಿಡಿದುಕೊಂಡು ಮನೆಯಲ್ಲಿ ಓಡಾಡುತ್ತಿದ್ದಾರೆ. ಯಾವ ಕ್ಷಣದಲ್ಲಿ ಬೇಕಾದ್ರು ನಮ್ಮನ್ನು ಸಾಯಿಸಬಹುದು. ಅಲ್ಲದೇ ಊಟ ಹಾಗೂ ನೀರಿನಲ್ಲಿ ವಿಷ ಸೇರಿಸಿ ಕೊಡುತ್ತಿದ್ದಾರೆ. ಮಾದಕ ವಸ್ತು ನೀಡುತ್ತಿದ್ದಾರೆ. ಪತಿಗೆ ಉಗ್ರನೊಬ್ಬನ ಜೊತೆ ಸಂಪರ್ಕ ಇದೆ. ಅವರ ವಿರುದ್ಧ ಸುಮೋಟೊ ಕೇಸ್ ದಾಖಲಿಸಿ ಎಂದು ಪಲ್ಲವಿ ಅವರು ಮನವಿ ಮಾಡಿದ್ದರು. ಇದನ್ನೂ ಓದಿ: ನಿವೃತ್ತ IPS ಅಧಿಕಾರಿಗೆ 10 ಬಾರಿ ಚಾಕುವಿನಿಂದ ಇರಿದು ಕೊಂದ ಪತ್ನಿ; 15 ನಿಮಿಷ ನರಳಿ ಪ್ರಾಣಬಿಟ್ಟ ಓಂ ಪ್ರಕಾಶ್‌

Share This Article