ಕಾಲಿವುಡ್ ನಟ ಧನುಷ್ (Dhanush) ಅಭಿನಯದ ಮೋಸ್ಟ್ ಅವೈಟೆಡ್ ‘ಕುಬೇರ’ (Kubera) ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ‘ಪೋಯಿವಾ ಪೋಯಿವಾ ನನ್ಬ’ ಹಾಡು ರಿಲೀಸ್ ಆಗಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದನ್ನೂ ಓದಿ:ಉಡುಪಿ| ಹೊಸ ಮಾರಿಗುಡಿಗೆ ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಭೇಟಿ
View this post on Instagram
‘ಪೋಯಿವಾ ಪೋಯಿವಾ ನನ್ಬ’ ಸಾಹಿತ್ಯದಿಂದ ಶುರುವಾಗುವ ಹಾಡು ಸಖತ್ ಅಟ್ರ್ಯಾಕ್ಟೀವ್ ಆಗಿದೆ. ಈ ಹಾಡಿಗೆ ಸಖತ್ ಆಗಿ ಧನುಷ್ ಕುಣಿದು ಕುಪ್ಪಳಿಸಿದ್ದಾರೆ. ಹಾಡಿನ ಲಿರಿಕ್ಸ್ ಕೂಡ ಕ್ಯಾಚಿ ಆಗಿದೆ. ‘ಪುಷ್ಪ’ ಖ್ಯಾತಿಯ ದೇವಿಶ್ರೀ ಪ್ರಸಾದ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ:ಕನ್ನಡಕ್ಕೆ ಬಂದ್ರು ಕುಡ್ಲದ ಬೆಡಗಿ- ಸುದೀಪ್ ಸಿನಿಮಾದಲ್ಲಿ ಪೂಜಾ ಹೆಗ್ಡೆ
‘ಕುಬೇರ’ ಸಿನಿಮಾದಲ್ಲಿ ಧನುಷ್ ಭಿಕ್ಷುಕನ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ನಿಜಕ್ಕೂ ಧನುಷ್ ಭಿಕ್ಷುಕನ ಅಥವಾ ಟೈಟಲ್‌ಗೆ ತಕ್ಕಂತೆ ಕುಬೇರನಾ? ಎಂದು ಚಿತ್ರ ರಿಲೀಸ್ ಆಗುವವರೆಗೂ ಕಾಯಬೇಕಿದೆ. ಧನುಷ್ ಜೊತೆ ರಶ್ಮಿಕಾ ಮಂದಣ್ಣ (Rashmika Mandanna), ನಾಗಾರ್ಜುನ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಈ ವರ್ಷ ಜೂನ್ 20ರಂದು ಸಿನಿಮಾ ರಿಲೀಸ್ ಆಗಲಿದೆ.