ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮೊಂದಿಗೆ ಇದ್ದಾನೆ: ಕಹಿ ಘಟನೆ ನೆನೆದ ವೈಷ್ಣವಿ

Public TV
2 Min Read
vaishnavi gowda 9

‘ಸೀತಾರಾಮ’ ಸೀರಿಯಲ್ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಅನುಕೂಲ್ ಮಿಶ್ರಾ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮದುವೆಯಾಗೋ ಭಾವಿ ಪತಿ ಬಗ್ಗೆ ಓಪನ್ ಆಗಿ ‘ಪಬ್ಲಿಕ್ ಟಿವಿ’ ಜೊತೆ ನಟಿ ಹಂಚಿಕೊಂಡಿದ್ದಾರೆ. ಈ ವೇಳೆ, ಈ ಹಿಂದೆ ಮುರಿದುಬಿದ್ದ ಸಂಬಂಧದ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಜೀವನದಲ್ಲಿ ಆಗೋದೆಲ್ಲಾ ಒಳ್ಳೆಯದಕ್ಕೆ ಎಂದು ನಟಿ ವೈಷ್ಣವಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ

vaishnavi gowda

ನನ್ನ ಜೀವನದಲ್ಲಿ ಒಂದನ್ನೇ ನಂಬಿರೋದು. ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮ ಜೊತೆ ಇದ್ದಾನೆ. ಅವರು ಯಾವತ್ತೂ ನನ್ನ ಕೈಬಿಡೋದಿಲ್ಲ. ಅದನ್ನು ಅಷ್ಟೇ ನಂಬಿದ್ದೀನಿ. ಒಳ್ಳೆಯ ಮನಸ್ಸಿದ್ದರೆ ಒಳ್ಳೆಯದು ಆಗುತ್ತದೆ ಎಂದಿದ್ದಾರೆ. ಈ ಹಿಂದೆ ನಟ ವಿದ್ಯಾಭರಣ (Vidyabharan) ಜೊತೆ ಮುರಿದುಬಿದ್ದ ಮದುವೆ ವಿಚಾರಕ್ಕೆ ನಟಿ ಕ್ಲ್ಯಾರಿಟಿ ನೀಡಿದ್ದಾರೆ. ಕಹಿ ಘಟನೆ ಮರೆತು ಈಗ ಅನುಕೂಲ್ ಜೊತೆ ಹೊಸ ಅದ್ಯಾಯಕ್ಕೆ ಮುನ್ನುಡಿ ಬರೆಯಲು ವೈಷ್ಣವಿ ರೆಡಿಯಾಗಿದ್ದಾರೆ. ಇದನ್ನೂ ಓದಿ:ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

ಕಳೆದ ಸೋಮವಾರವಷ್ಟೇ ಏರ್‌ಫೋರ್ಸ್ ಲೆಫ್ಟಿನೆಂಟ್ ಆಗಿರುವ ಛತ್ತೀಸ್‌ಗಢ ಮೂಲದ ಅನುಕೂಲ್ (Anukool Mishra) ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಒಂದು ವರ್ಷದಿಂದ ಅನುಕೂಲ್ ಪರಿಚಯವಿದೆ. ಇದು ಲವ್ ಮ್ಯಾರೇಜ್ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಅರೇಂಜ್ ಮ್ಯಾರೇಜ್. ಇದು ಹಿರಿಯರು ನೋಡಿ ನಿಶ್ಚಯಿಸಿದ ಮದುವೆ ಎಂದು ಸ್ಪಷ್ಟನೆ ನೀಡಿದ್ದಾರೆ.

vaishnavi gowda 7

ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಅಪ್ಪ ಅಮ್ಮ ಈ ಮದುವೆ ನಿಶ್ಚಯಿಸಿದ್ದಾರೆ. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು. ಮದುವೆ ತಯಾರಿ ನಡೀತಿದೆ. ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದರು.

vaishnavi gowda 1 1

ಈಗ ಎಲ್ಲರಿಗೂ ಉತ್ತರ ಸಿಕ್ಕಿದೆ. ನನಗೆ ಯಾವ ಥರದ ಹುಡುಗ ಬೇಕಿತ್ತು ಎಂದು. ಅನುಕೂಲ್ ಅವರು ಏರ್‌ಫೋರ್ಸ್‌ನಲ್ಲಿ ಇರೋದ್ರಿಂದ ಎತ್ತರವಾಗಿದ್ದಾರೆ. ಹೈಟ್ ಮ್ಯಾಚ್ ಆಗದೇ ಇದ್ದರೂ ಹಾರ್ಟ್ ಮ್ಯಾಚ್ ಆಗಿದೆ ಎನ್ನುತ್ತಾ ಭಾವಿ ಪತಿ ನೆನೆದು ವೈಷ್ಣವಿ ನಾಚಿನೀರಾಗಿದ್ದಾರೆ.

Share This Article