ತುಮಕೂರು: 2008ರಲ್ಲಿ ನಾನು ಕ್ಷೇತ್ರಕ್ಕೆ ಬಂದಾಗ ನೀಡಿದ್ದ ನೀರಾವರಿ ಭರವಸೆ ಈಡೇರಿಸಿದ್ದೇನೆ. ಬೂಟಾಟಿಕೆಯ ರಾಜಕಾರಣ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದರು.
ಕೊರಟಗೆರೆ (Koratagere) ತಾಲೂಕಿನ ಗೊರವನಹಳ್ಳಿ ಬಳಿ ಸಣ್ಣ ನೀರಾವರಿ ಇಲಾಖೆಯಿಂದ ನಡೆದ ಎತ್ತಿನಹೊಳೆ (Ettinahole) ಯೋಜನೆಯಡಿ ತಾಲೂಕಿನ 62 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದನ್ನೂ ಓದಿ: Uttar Pradesh | ಅಳಿಯನ ತಂದೆಯೊಂದಿಗೆ 4 ಮಕ್ಕಳ ತಾಯಿ ಪರಾರಿ
ಗೃಹಸಚಿವ ಸ್ಥಾನದ ಜವಾಬ್ದಾರಿ ಹೊತ್ತಿರುವ ಕಾರಣ ಕ್ಷೇತ್ರದ ಹಳ್ಳಿ, ಹಳ್ಳಿಗೂ ಬರಲು ಸಾಧ್ಯವಾಗಿಲ್ಲ. ಆದರೆ ಕ್ಷೇತ್ರದ ಜನರನ್ನು ಮರೆತಿಲ್ಲ ಎಂದರು. ಇದನ್ನೂ ಓದಿ: IPL 2025 | ಸೂಪರ್ ಸಂಡೇನಲ್ಲಿ ಚೆನ್ನೈ Vs ಮುಂಬೈ ಮೆಗಾ ಫೈಟ್