ಜೈಪುರ: ಕೊನೆಯಲ್ಲಿ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದಿಂದ ರಾಜಸ್ಥಾನ ರಾಯಲ್ಸ್ (Rjasthan Royals) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) 2 ರನ್‌ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಲಕ್ನೋ 5 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ 20 ಓವರ್‌ಗಳಲ್ಲಿ 5 ವಿಕೆಟಿ ನಷ್ಟಕ್ಕೆ 178 ರನ್ ಹೊಡೆದು ಸೋಲನ್ನು ಒಪ್ಪಿಕೊಂಡಿತ್ತು.
ಕೊನೆಯ ಓವರ್‌ವರೆಗೂ ಗೆಲುವು ರಾಜಸ್ಥಾನ ಕಡೆಗೆ ವಾಲಿತ್ತು. ಕೊನೆಯ 6 ಎಸೆತಗಳಲ್ಲಿ 9 ರನ್ ಬೇಕಿತ್ತು.ಕ್ರೀಸ್‌ನಲ್ಲಿ ಹೆಟ್ಮೇಯರ್ ಮತ್ತು ಧ್ರುವ್ ಜುರೇಲ್ ಇದ್ದರು. ಮೊದಲ ಎರಡು ಎಸೆತದಲ್ಲಿ ಸಿಂಗಲ್ ಮತ್ತು 2 ರನ್ ತೆಗೆದ ಹೆಟ್ಮೇಯರ್ ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾಗುವ ಮೂಲಕ ಪಂದ್ಯ ರೋಚಕ ಘಟ್ಟದತ್ತ ತಿರುಗಿತು.
Heart-racing, nerve-wracking, and simply unforgettable! 🤯#LSG defy the odds and seal a 2-run victory over #RR after the most dramatic final moments 💪
Scorecard ▶️ https://t.co/02MS6ICvQl#TATAIPL | #RRvLSG | @LucknowIPL pic.twitter.com/l0XsCGGuPg
— IndianPremierLeague (@IPL) April 19, 2025
4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5 ಎಸೆತದಲ್ಲಿ ದುಬೆ ಸಿಕ್ಸ್ ಸಿಡಿಸಲು ಹೋದರು. ಆದರೆ ಮಿಲ್ಲರ್ ಕ್ಯಾಚ್ ಡ್ರಾಪ್ ಮಾಡಿದ ಕಾರಣ 2 ರನ್ ಓಡಿದರು. ಕೊನೆಯ ಎಸೆತದಲ್ಲಿ 4 ರನ್ ಬೇಕಿತ್ತು. ಆದರೆ ದುಬೆ ಸಿಂಗಲ್ ರನ್ ತೆಗೆದ ಕಾರಣ ಲಕ್ನೋ ಪಂದ್ಯವನ್ನು ಗೆದ್ದುಕೊಂಡಿತು.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ಸೂಪರ್ ಓವರ್‌ನಲ್ಲಿ ಸೋತಿತ್ತು. ಈಗ ಲಕ್ನೋ ವಿರುದ್ಧವೂ ಕೊನೆ ಕ್ಷಣದಲ್ಲಿ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟ ಕಾರಣ ರಾಜಸ್ಥಾನ ಸೋಲು ಕಂಡಿದೆ.
Absolutely 🔥 🔥 🔥
Avesh Khan delivered a yorker masterclass when it mattered most, and just like that, #LSG pull off a 2-run thriller!
How do you even rate that spell of magic?! 🔥
Scorecard ▶️ https://t.co/02MS6ICvQl#TATAIPL | #RRvLSG | @LucknowIPL pic.twitter.com/1UKViGuhUl
— IndianPremierLeague (@IPL) April 19, 2025
ರಾಜಸ್ಥಾನ ಪರ ಜೈಸ್ವಾಲ್ 74 ರನ್(52 ಎಸೆತ, 5 ಬೌಂಡರಿ, 4 ಸಿಕ್ಸ್), ಮೊದಲ ಪಂದ್ಯವಾಡಿದ 14 ರ ಸೂರ್ಯವಂಶಿ 34 ರನ್(20 ಎಸೆತ, 2 ಬೌಂಡರಿ, 3 ಸಿಕ್ಸ್), ನಾಯಕ ರಿಯಾನ್ ಪರಾಗ್ 39 ರನ್(26 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟಾದರು. ಅವೇಶ್ ಖಾನ್ ಮೂರು ವಿಕೆಟ್ ಕೀಳುವ ಮೂಲಕ ರಾಜಸ್ಥಾನಕ್ಕೆ ಶಾಕ್ ನೀಡಿದರು.
ಲಕ್ನೋ ಪರ ಮಾರ್ಕ್ರಾಮ್ 66 ರನ್(45 ಎಸೆತ, 5 ಬೌಂಡರಿ, 3 ಸಿಕ್ಸ್), ಅಯುಷ್ ಬದೋನಿ 50 ರನ್ (34 ಎಸೆತ, 5 ಬೌಂಡರಿ, 1 ಸಿಕ್ಸ್) ಹೊಡೆದರೆ ಕೊನೆಯಲ್ಲಿ ಅಬ್ದುಲ್ ಸಮಾದ್ ಔಟಾಗದೇ 30 ರನ್ (10 ಎಸೆತ, 4 ಸಿಕ್ಸ್) ಸಿಡಿಸಿದ ಪರಿಣಾಮ ತಂಡ 180 ರನ್ ಗಳಿಸಿತು.