ಐಶ್ವರ್ಯಾ ರೈ ಜೊತೆ ಎರಡನೇ ಮಗು ಮಾಡ್ಕೋತೀರಾ ಅಂದಿದ್ದಕ್ಕೆ ಅಭಿಷೇಕ್ ಬಚ್ಚನ್ ಹೇಳಿದ್ದೇನು..?

Public TV
1 Min Read
Abhishek Bachchan 1 1

ಬಾಲಿವುಡ್‌ ಸ್ಟಾರ್‌ ನಟರಾದ ಅಭಿಷೇಕ್‌ ಬಚ್ಚನ್‌ (Abhishek Bachchan) ಮತ್ತು ಐಶ್ವರ್ಯಾ ರೈ (Aishwarya Rai) ಕಾರಣಾಂತರಗಳಿಂದ ದೂರ ದೂರ ಇದ್ದಾರೆ. ಈ ನಡುವೆ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ಜೊತೆ ಎರಡನೇ ಮಗು ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಅಭಿಷೇಕ್‌ ನಾಚಿನೀರಾದ ಪ್ರಸಂಗ ನಡೆದಿದೆ. ವರ್ಷಗಳ ಹಿಂದಿನ ಕಾರ್ಯಕ್ರಮದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಈಗ ವೈರಲ್‌ ಆಗಿದೆ.

ಒಮ್ಮೆ ಅಭಿಷೇಕ್ ಬಚ್ಚನ್, ರಿತೇಶ್ ದೇಶ್ಮುಖ್ ಅವರ ‘ಕೇಸ್ ತೋ ಬಂತಾ ಹೈ’ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಆ ವೇಳೆ, ಐಶ್ವರ್ಯಾ ರೈ ಜೊತೆ ಎರಡನೇ ಮಗು ಮಾಡಿಕೊಳ್ತೀರಾ ಎಂದು ತಮಾಷೆಯಾಗಿ ಪ್ರಶ್ನೆ ಕೇಳಲಾಯಿತು. ಆಗ ಅಭಿಷೇಕ್‌ ನಾಚಿಕೆ ಪಟ್ಟುಕೊಂಡರು.

ರಿತೇಶ್‌ ಮಾತನಾಡುತ್ತಾ, ‘ಅಮಿತಾಬ್‌ ಜೀ.. ಐಶ್ವರ್ಯ, ಆರಾಧ್ಯ ಮತ್ತು ನೀವು ಅಭಿಷೇಕ್. ಹೆಸರುಗಳು ಎ ಅಕ್ಷರದಿಂದ ಪ್ರಾರಂಭವಾಗುತ್ತವೆ. ಹಾಗಾದರೆ, ಜಯಾ ಬಚ್ಚನ್‌, ಶ್ವೇತಾ ಅವರು ಏನು ಮಾಡಿದರು’ ಎಂದು ಕೇಳುತ್ತಾರೆ. ಅದಕ್ಕೆ ಅಭಿಷೇಕ್‌ ಪ್ರತಿಕ್ರಿಯಿಸಿ, ‘ಇದನ್ನು ಅವರ ಬಳಿಯೇ ಕೇಳಬೇಕು’ ಎನ್ನುತ್ತಾರೆ.

ಮುಂದುವರಿದು ರಿತೀಶ್‌, ‘ಆರಾಧ್ಯ ನಂತರ?’ ಎಂದು ತಮಾಷೆಯಾಗಿ ಕೇಳುತ್ತಾರೆ. ಅಭಿಷೇಕ್‌ ನಸುನಗುತ್ತಾ, ‘ಇಲ್ಲ, ಮುಂದಿನ ಮಗು ವಿಚಾರ ಬಂದಾಗ ನೋಡೋಣ’ ಎಂದು ನಾಚಿಕೆಯಿಂದ ಉತ್ತರಿಸಿದ್ದಾರೆ.

Share This Article