ಮುಂಬೈ: ಮಹಾರಾಷ್ಟ್ರ ಮತ್ತು ಮರಾಠಿ ಜನರ ಹಿತಾಸಕ್ತಿಗಾಗಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಬರಲು ಸಿದ್ಧರಿದ್ದೇವೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ನೀಡಿರುವ ಈ ಹೇಳಿಕೆ ಮಹರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಚಲನಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಕೇಳಿದ ಪ್ರಶ್ನೆಗೆ ರಾಜ್ ಠಾಕ್ರೆ ಉತ್ತರಿಸುತ್ತಾ, ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಸಣ್ಣ ವಿವಾದಗಳನ್ನು ಬದಿಗಿಡಬಹುದು. ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಸಿದ್ಧರಿದ್ದರೆ ಅವರೊಂದಿಗೆ ಕೆಲಸ ಮಾಡಬಹುದು ಎಂದು ಹೇಳಿದರು. ಇದನ್ನೂ ಓದಿ: ಪ. ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತನ್ನಿ – ಕೇಂದ್ರಕ್ಕೆ ನಟ ಮಿಥುನ್ ಚಕ್ರವರ್ತಿ ಆಗ್ರಹ
ಠಾಕ್ರೆ ಸಹೋದರರು ಇಬ್ಬರೂ ಒಟ್ಟಿಗೆ ಬಂದರೆ ಎಂಬ ಮಂಜ್ರೇಕರ್ ಅವರ ಪ್ರಶ್ನೆಗೆ ಉತ್ತರಿಸಿದ ರಾಜ್ ಠಾಕ್ರೆ, ನನಗೆ ಮಹಾರಾಷ್ಟ್ರದ ಹಿತಾಸಕ್ತಿ ದೊಡ್ಡದು ಮತ್ತು ಉಳಿದೆಲ್ಲವೂ ಅದರ ಮುಂದೆ ಗೌಣ. ಅದಕ್ಕಾಗಿ ನಾನು ಸಣ್ಣಪುಟ್ಟ ವಿವಾದಗಳನ್ನು ಬದಿಗಿಡಬಹುದು ಮತ್ತು ನಾನು ಉದ್ಧವ್ ಜೊತೆ ಕೆಲಸ ಮಾಡಲು ಸಿದ್ಧನಿದ್ದೇನೆ. ಅವರು ಕೂಡ ಅದಕ್ಕೆ ಸಿದ್ಧರಿದ್ದಾರೆಯೇ ಎಂದು ಮರು ಪ್ರಶ್ನಿಸಿದ್ದಾರೆ.
ತಮ್ಮ ಪಕ್ಷದ ಟ್ರೇಡ್ ಯೂನಿಯನ್ ವಿಭಾಗವಾದ ಭಾರತೀಯ ಕಾಮಗರ್ ಸೇನಾದ ಸಮಾರಂಭದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಮರಾಠಿ ಭಾಷೆ ಮತ್ತು ಮಹಾರಾಷ್ಟ್ರಕ್ಕಾಗಿ ವಿವಾದಗಳನ್ನು ಬದಿಗಿಡಲು ನಾನು ಸಿದ್ಧ ಎಂದು ಹೇಳಿದ್ದಾರೆ. ಆದಾಗ್ಯೂ, ಆ ಸಂದರ್ಭದಲ್ಲಿ ರಾಜ್ ಠಾಕ್ರೆ ಮಹಾರಾಷ್ಟ್ರ ವಿರೋಧಿಗಳು ಅಥವಾ ಅಂತಹ ಪಕ್ಷಗಳಿಗೆ ಕೆಲಸ ಮಾಡುವವರೊಂದಿಗೆ ಸಹವಾಸ ಮಾಡಬಾರದು ಎಂಬ ಷರತ್ತನ್ನು ಹಾಕಿದ್ದಾರೆ. ಇದನ್ನೂ ಓದಿ: ಈ ವರ್ಷಾಂತ್ಯದಲ್ಲಿ ಭಾರತಕ್ಕೆ ಬರುತ್ತೇನೆ: ಮಸ್ಕ್ ಘೋಷಣೆ
ನಾನು ಕೂಡ ಮರಾಠಿ ಭಾಷೆ ಮತ್ತು ಮಹಾರಾಷ್ಟ್ರಕ್ಕಾಗಿ ಸಣ್ಣಪುಟ್ಟ ವಿವಾದಗಳನ್ನು ಬದಿಗಿಡಲು ಸಿದ್ಧನಿದ್ದೇನೆ. ನಾನು ಒಟ್ಟಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೆ ರಾಜ್ ಠಾಕ್ರೆ ಇನ್ನು ಮುಂದೆ ಮಹಾರಾಷ್ಟ್ರ ವಿರೋಧಿ ಜನರು ಮತ್ತು ಪಕ್ಷಗಳನ್ನು ಆಯೋಜಿಸಬಾರದು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮುಂದೆ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಹೇಳಿದ್ದಾರೆ. ಈ ಹೇಳಿಕೆಗಳು ಭವಿಷ್ಯಸಲ್ಲಿ ಠಾಕ್ರೆ ಸಹೋದರರು ಒಂದಾಗುವ ಸುಳಿವು ನೀಡಿದೆ.
ಇದಕ್ಕೂ ಮೊದಲು ಕಳೆದ ಫೆಬ್ರವರಿಯಲ್ಲಿ ಮುಂಬೈನ ಅಂಧೇರಿಯಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಉದ್ಧವ್ ಮತ್ತು ರಾಜ್ ಠಾಕ್ರೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದು ರಾಜಕೀಯ ಸಮೀಕರಣಗಳಲ್ಲಿ ಬದಲಾವಣೆಯ ಸಂಕೇತವೆಂದು ರಾಜಕೀಯ ವಿಶ್ಲೇಷಕರು ಭಾವಿಸಿದ್ದರು. ಈಗ ರಾಜ್ ಠಾಕ್ರೆಯ ಇತ್ತೀಚಿನ ಹೇಳಿಕೆಯು ಆ ಊಹಾಪೋಹಗಳಿಗೆ ಪುಷ್ಠಿ ನೀಡಿವೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ಟೆಂಟ್ ಸಾಮಗ್ರಿ ಪೂರೈಸುತ್ತಿದ್ದ ಕಂಪನಿಯ ಗೊಡೋನ್ನಲ್ಲಿ ಅಗ್ನಿ ದುರಂತ