ಬೆಂಗಳೂರು: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ (CET Exam) ಕೂರಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ವಿದ್ಯಾರ್ಥಿಗೆ (Bidar Student) ನ್ಯಾಯ ಕೊಡಿಸಲು ಕೆಇಎ (KEA) ಸಿದ್ಧತೆ ನಡೆಸಿದೆ.
ಇಂದು ಅಥವಾ ಭಾನುವಾರದೊಳಗೆ ಕೆಇಎನಿಂದ ಈ ಕುರಿತು ನಿರ್ಧಾರ ಸಾಧ್ಯತೆಯಿದೆ. ಈಗಾಗಲೇ ಡಿಸಿಯಿಂದ ಕೆಇಎ ವರದಿ ಕೇಳಿದೆ. ಡಿಸಿ ವರದಿ ಕೊಟ್ಟ ಬಳಿಕ ವಿದ್ಯಾರ್ಥಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳುವ ನಿರ್ಧಾರವನ್ನು ಕೆಇಎ ಮಾಡಿದೆ. ಗಣಿತ ವಿಷಯಕ್ಕೆ ವಿಶೇಷ ಪ್ರಕರಣದಡಿ ಅಂಕ ಕೊಡುವ ಸಾಧ್ಯತೆಯಿದ್ದು, ಸರ್ಕಾರದಿಂದ ಗ್ರೀನ್ ಸಿಗ್ನಲ್ ಕೊಟ್ಟರೆ ಕೆಇಎ ವಿದ್ಯಾರ್ಥಿಗೆ ರ‍್ಯಾಂಕ್ ನೀಡಲಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡ ಕುಸಿತ – 9 ತಿಂಗಳ ಮಗು ಸೇರಿ ನಾಲ್ವರು ಸಾವು
ರ‍್ಯಾಂಕ್ ಕೊಡೋದು ಹೇಗೆ?
*ಬೀದರ್ ಪ್ರಕರಣ ವಿಶೇಷ ಪ್ರಕರಣ ಎಂದು ಪರಿಗಣನೆ.
*ಒಬ್ಬ ವಿದ್ಯಾರ್ಥಿಗೆ ಮರು ಪರೀಕ್ಷೆ ಮಾಡೋದು ದೊಡ್ಡ ರಿಸ್ಕ್.
*ವಿದ್ಯಾರ್ಥಿಗೆ ಅನ್ಯಾಯ ಆಗದಂತೆ ಕ್ರಮ ತೆಗೆದುಕೊಳ್ಳಲು ಕೆಇಎ ನಿರ್ಧಾರ.
*ಗಣಿತ ಪರೀಕ್ಷೆ ಬರೆಯದೇ ಇರುವುದರಿಂದ ಎಂಜಿನಿಯರಿಂಗ್ ಸೀಟು ಸಿಗಲ್ಲ.
*ಹೀಗಾಗಿ ಗಣಿತ ವಿಷಯಕ್ಕೆ ಅಂಕ ಕೊಟ್ಟು ರ‍್ಯಾಂಕ್ ಕೊಡುವ ಸಾಧ್ಯತೆ.
ರ‍್ಯಾಂಕ್‌ಗೂ ಮುನ್ನ ಪಿಯುಸಿಯಲ್ಲಿನ ಗಣಿತ ವಿಷಯ ಅಂಕ ಪರಿಶೀಲನೆ.
*ಪಿಯುಸಿ ಎಕ್ಸಾಂ ಜೊತೆಗೆ ಸಿಇಟಿ ಎಕ್ಸಾಂನ 3 ವಿಷಯಗಳ ಅಂಕವನ್ನು ಪರಿಗಣನೆ.
*ಪಿಯುಸಿ ಮತ್ತು ಸಿಇಟಿ ಅಂಕ ಪರಿಶೀಲಿಸಿ ಗಣಿತ ವಿಷಯಕ್ಕೆ ಅವರೇಜ್ ಅಂಕ ನೀಡಲಾಗುವುದು.