ಬರ್ತ್‌ಡೇ ಖುಷಿಯಲ್ಲಿದ್ದ ಲವ್ಲಿ ಸ್ಟಾರ್ ಪ್ರೇಮ್‌ಗೆ ಶಾಕ್ ಕೊಟ್ಟ ನಿರ್ಮಾಪಕಿ

Public TV
1 Min Read
prem shruti naidu

ವ್ಲಿ ಸ್ಟಾರ್ ಪ್ರೇಮ್‌ಗೆ (Lovely Star Prem) ಇಂದು (ಏ.18) ಹುಟ್ಟುಹಬ್ಬದ ಸಂಭ್ರಮ. ಆದರೆ ಬರ್ತ್‌ಡೇ ಖುಷಿಯಲ್ಲಿದ್ದ ನಟನ ವಿರುದ್ಧ ನಿರ್ಮಾಪಕಿ ಶ್ರುತಿ ನಾಯ್ಡು (Shruti Naidu) ಗರಂ ಆಗಿದ್ದಾರೆ. ಪ್ರೇಮ್ ವಿರುದ್ಧ ಕಾನೂನು ಸಮರಕ್ಕೆ ನಿಂತಿದ್ದಾರೆ. ಇದನ್ನೂ ಓದಿ:ಉಪ್ಪಿ ಅಣ್ಣನ ಮಗನ ಸಿನಿಮಾದಲ್ಲಿ ಲವ್ಲಿ ಸ್ಟಾರ್‌- ‘ಸ್ಪಾರ್ಕ್‌’ನಲ್ಲಿ ನೆನಪಿರಲಿ ಪ್ರೇಮ್

Nenapirali Prem 1

ನಟನ ಹುಟ್ಟುಹಬ್ಬದ ಹಿನ್ನೆಲೆ ಇಂದು ‘ಸ್ಪಾರ್ಕ್’ (Spark Film) ಚಿತ್ರತಂಡ ವಿಶೇಷವಾಗಿ ಪ್ರೇಮ್ ಪಾತ್ರದ ಪೋಸ್ಟರ್ ಅನ್ನು ರಿವೀಲ್ ಮಾಡಿತ್ತು. ಆ ಪೋಸ್ಟರ್‌ನಲ್ಲಿ ರಮೇಶ್ ಇಂದಿರಾ ಅವರ ಫೋಟೋವನ್ನು ಸಿಗಾರ್‌ನಿಂದ ಪ್ರೇಮ್ ಸುಡುತ್ತಿರುವಂತೆ ಡಿಸೈನ್ ಮಾಡಲಾಗಿತ್ತು. ಆದರೆ ಆ ರಮೇಶ್ ಇಂದಿರಾ ನಟಿಸಿದ್ದ ‘ಭೀಮ’ ಸಿನಿಮಾದಾಗಿತ್ತು. ಅನುಮತಿ ಪಡೆಯದೇ ರಮೇಶ್ ಇಂದಿರಾ ಅವರ ಫೋಟೋ ಬಳಸಿದ್ದಕ್ಕೆ ಪ್ರೇಮ್ ಮತ್ತು ಚಿತ್ರತಂದ ವಿರುದ್ಧ ಶ್ರುತಿ ನಾಯ್ಡು ಗರಂ ಆಗಿದ್ದಾರೆ. ಇದನ್ನೂ ಓದಿ:‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರಕ್ಕಾಗಿ ಒಂದಾದ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ನಿರ್ಮಾಪಕರು

shruti naidu

ಆ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶ್ರುತಿ ನಾಯ್ಡು, ಈ ಚಿತ್ರತಂಡದವರು ಅನೈತಿಕವಾಗಿ ನಡೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ಈ ಚಿತ್ರವನ್ನು ನಟನ ಅನುಮತಿ ಪಡೆಯದೇ ಪೋಸ್ಟ್ ಮಾಡಿದ್ದಾರೆ. ನಟ ಹಿಡಿದುಕೊಂಡ ಪೋಸ್ಟರ್‌ನಲ್ಲಿ ಬಳಸಲಾದ ಈ ಚಿತ್ರವು ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ‘ಭೀಮ’ ಚಿತ್ರದ್ದು. ಅದರಲ್ಲಿರೋ ಫೋಟೋವನ್ನು ಭೀಮ ಚಿತ್ರಕ್ಕಾಗಿ ತೆಗೆದುಕೊಳ್ಳಲಾಗಿತ್ತು. ಆದರೆ ಈ ಫೋಟೋವನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪರವಾಗಿ ಈ ಚಿತ್ರ ತಂಡ ಮತ್ತು ನಟನಿಗೆ ಕಾನೂನು ನೋಟಿಸ್ ಕಳುಹಿಸುತ್ತೇನೆ ಬರೆದುಕೊಂಡಿದ್ದಾರೆ. ಚಿತ್ರತಂಡ ಈ ನಡೆ ಶ್ರುತಿ ನಾಯ್ಡು ಮುನಿಸಿಗೆ ಕಾರಣವಾಗಿದೆ.

shruti naidu 1

ಶ್ರುತಿ ನಾಯ್ಡು ಹಂಚಿಕೊಂಡಿರುವ ಪೋಸ್ಟ್‌ಗೆ ಚಿತ್ರತಂಡದವರಾಗಲಿ ಅಥವಾ ನಟನಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಚಾರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡ್ತಾರೆ ಎಂಬುದುನ್ನು ಕಾದುನೋಡಬೇಕಿದೆ.

Share This Article