ಸ್ಯಾಂಡಲ್‌ವುಡ್‌ನಲ್ಲಿ ಯಾವ ಸಿನಿಮಾಗಳು ಸಕ್ಸಸ್‌ನ ಹಾದಿ ಕಂಡಿಲ್ಲ. ಸಪ್ಪೆಯಾಗಿರುವ ಚಂದನವನದಿಂದ ಈಗ ಭರ್ಜರಿ ಸುದ್ದಿ ಹೊರಬಂದಿದೆ. 2024ರಲ್ಲಿ ರಿಲೀಸ್ ಆಗಿದ್ದ ಸೂಪರ್ ಸಕ್ಸಸ್ ಸಿನಿಮಾಗಳಾದ ‘ಬ್ಲಿಂಕ್’ (Blink) ಮತ್ತು ‘ಶಾಖಾಹಾರಿ’ ಸಿನಿಮಾದ ನಿರ್ಮಾಪಕರು ಒಟ್ಟಿಗೆ ಸೇರಿ ‘ಎಡಗೈಯೇ ಅಪಘಾತಕ್ಕೆ ಕಾರಣ’ (Edagaiye Apaghatakke Karana) ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:ದಕ್ಷಿಣ ಭಾರತದಲ್ಲಿ ನನ್ನ ಹೆಸರಲ್ಲೊಂದು ದೇವಸ್ಥಾನ ಆಗಬೇಕು ಎಂದ ಊರ್ವಶಿ – ಟ್ರೋಲ್ ಆದ ನಟಿ

ನಿರ್ಮಾಪಕ ರಾಜೇಶ್ ಕೀಳಂಬಿ ಮಾತನಾಡಿ, ಈ ಸಿನಿಮಾದ ಕಂಟೆಂಟ್ ಕ್ವಾಲಿಟಿ ಅದ್ಭುತವಾಗಿದೆ. ಈ ಸಿನಿಮಾದಿಂದ ನನ್ನ ಪ್ರೊಡಕ್ಷನ್ ವ್ಯಾಲ್ಯೂ ಕೂಡ ಜಾಸ್ತಿ ಆಗುತ್ತೆ ಹಾಗಾಗಿ ಈ ಸಿನಿಮಾ ರಿಲೀಸ್ ಮಾಡಲು ಕೈಜೋಡಿಸಿದ್ದೇನೆ. ‘ಶಾಖಾಹಾರಿ’ ಮತ್ತು ‘ಬ್ಲಿಂಕ್’ ಸಿನಿಮಾ ಮಾಡುವಾಗ ನಾವಿಬ್ಬರು ಹೊಸ ನಿರ್ಮಾಪಕರು ಆದರೀಗ ಇಬ್ಬರ ಅನುಭವ ಈ ಸಿನಿಮಾಗೆ ಸಹಾಯವಾಗಲಿದೆ ಎಂದಿದ್ದಾರೆ.
View this post on Instagram
ನಿರ್ದೇಶಕ ಸಮರ್ಥ್ ಈ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇಬ್ಬರೂ ಸ್ಟ್ರಾಂಗ್ ನಿರ್ಮಾಪಕರ ಸೇರ್ಪಡೆಯಿಂದ ತಂಡಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ. ಎರಡು ಸೂಪರ್ ಸಕ್ಸಸ್ ಸಿನಿಮಾಗಳನ್ನು ನೀಡಿದ ನಿರ್ಮಾಪಕರು ನನ್ನ ಸಿನಿಮಾಗೆ ಕೈಜೋಡಿಸಿರೋದ್ರಿಂದ ತುಂಬಾ ಖುಷಿಯಾಗಿದ ಎಂದಿದ್ದಾರೆ.
ರವಿಚಂದ್ರ ಎಜೆ ಮಾತನಾಡಿ, ‘ಕಳೆದ ಆರು ತಿಂಗಳುಗಳಲ್ಲಿ ನನಗೆ ಅನೇಕ ಕನ್ನಡ ಚಲನಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿದೆ. ಅವಗಳಲ್ಲಿ ‘ಎಡಗೈಯೇ ಅಪಘಾತಕ್ಕೆ ಕಾರಣ’ ನಿಜವಾಗಿಯೂ ಅತ್ಯುತ್ತಮವಾದ ಚಿತ್ರವಾಗಿದೆ. ನಮ್ಮ ಬ್ಯಾನರ್ ಜನನಿ ಸಂಸ್ಥೆ ಅಡಿಯಲ್ಲಿ ನೋಡಿದವರು ಏನಂತಾರೆ, ಅನಮಧೇಯ ಅಶೋಕ್ ಕುಮಾರ್ ಮತ್ತು ಭಾವ ತೀರ ಯಾನ ಸೇರಿದಂತೆ ಹಲವಾರು ಸಿನಿಮಾಗಳನ್ನು ಹೆಮ್ಮೆಯಿಂದ ವಿತರಿಸಿದ್ದೇವೆ. ಈ ದಿಗಂತ್ ಸಿನಿಮಾ ವಿತರಣೆ ಮಾಡುತ್ತಿದ್ದೇನೆ ಇದು 2025ರ ಸಕ್ಸಸ್‌ಫುಲ್ ಸಿನಿಮಾ ಆಗಲಿದೆ ಎಂದಿದ್ದಾರೆ.
‘ಎಡಗೈಯೇ ಅಪಘಾತಕ್ಕೆ ಕಾರಣ’ ಈಗಾಗಲೇ ಪೋಸ್ಟರ್ ಮತ್ತು ಟೀಸರ್‌ಗಳ ಮೂಲಕ ಕುತೂಹಲವನ್ನು ಹೆಚ್ಚಿಸಿದೆ. ಯಾವಾಗಲೂ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರದಲ್ಲಿ ದಿಗಂತ್‌ಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.



