ಬಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja) ಪುತ್ರಿ ಅಂಜನಾ (Anjana Sarja) ಬಹುಕಾಲದ ಗೆಳೆಯನ ಜೊತೆ ಎಂಗೇಜ್ ಆಗಿದ್ದಾರೆ. 13 ವರ್ಷಗಳ ಪ್ರೀತಿಗೆ ಉಂಗುರ ಮುದ್ರೆ ಒತ್ತಿದ್ದಾರೆ. ಇದನ್ನೂ ಓದಿ:ನಿನ್ನ ಪ್ರೀತಿ, ತ್ಯಾಗ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ: ಪತ್ನಿಗೆ ನಿಖಿಲ್ ಲವ್ಲಿ ವಿಶ್
ಇಟಲಿಯಲ್ಲಿ ಗೆಳೆಯನ ಜೊತೆ ಅಂಜನಾ ರೊಮ್ಯಾಂಟಿಕ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಂಜನಾ ಫೋಟೋಶೂಟ್‌ನಲ್ಲಿ ಅರ್ಜುನ್ ಸರ್ಜಾ ದಂಪತಿ, ಸಹೋದರಿ ಐಶ್ವರ್ಯಾ ದಂಪತಿ ಕೂಡ ಪೋಸ್ ನೀಡಿದ್ದಾರೆ. ಮಗಳ ಪ್ರೀತಿಗೆ ಅರ್ಜುನ್ ಸರ್ಜಾ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಪೊಲೀಸ್ ರೈಡ್ ವೇಳೆ ಹೋಟೆಲ್ ಕಿಟಕಿಯಿಂದ ನಟ ಶೈನ್ ಟಾಮ್ ಚಾಕೊ ಪರಾರಿ
ಅಂಜನಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಗೆಳೆಯನ ಪ್ರೇಮ ನಿವೇದನೆಗೆ ‘ಯೆಸ್ ಎನ್ನದೇ ಹೇಗಿರಲಿ’ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಅರ್ಜುನ್ ಸರ್ಜಾ, ನಾನು ಮೊದಲೇ ಊಹಿಸಿದ್ದೆ, ಅವನು ನಿನ್ನ ಪಾರ್ಟ್ನರ್ ಆಗುತ್ತಾನೆಂದು ಅಂತ ಕಾಮೆಂಟ್ ಮಾಡಿದ್ದಾರೆ.
ಫಾರಿನ್ ಹುಡುಗ ಐಸೆಯ ಜೊತೆ ಅಂಜನಾ ಎಂಗೇಜ್ ಆಗಿದ್ದು, ಅವರ ಮದುವೆಯ ಬಗ್ಗೆ ಇನ್ನೂ ಅಪ್‌ಡೇಟ್ ತಿಳಿಯಬೇಕಿದೆ. ಒಟ್ನಲ್ಲಿ ಅಂಜನಾ ಅವರ ಸಂಗಾತಿಯ ಆಯ್ಕೆ ಬಗ್ಗೆ ಕುಟುಂಬಸ್ಥರು ಖುಷಿಯಾಗಿದ್ದಾರೆ.
ಅಂದಹಾಗೆ, ಅರ್ಜುನ್ ಸರ್ಜಾ ಮೊದಲ ಪುತ್ರಿ ನಟಿ ಐಶ್ವರ್ಯಾ ಅವರು ಕಳೆದ ವರ್ಷ ತಮಿಳು ನಟ ಉಮಾಪತಿ ಜೊತೆ ಹಸೆಮಣೆ ಏರಿದ್ದರು. ಕಳೆದ ಜೂನ್ 10ರಂದು ಚನ್ನೈನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಉಮಾಪತಿ ಅವರನ್ನು ನಟಿ ಪ್ರೀತಿಸಿ ಮದುವೆಯಾದರು.