ನವದೆಹಲಿ: ವಕ್ಫ್ ಕಾಯ್ದೆಯ (Waqf Act) ಬಗ್ಗೆ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟ್ (Supreme Court) ಅರ್ಜಿ ವಿಚಾರಣೆಗೆ ಮಾನದಂಡ ಏನು ಎಂದು ವಕೀಲ ವಿಷ್ಣು ಶಂಕರ್ ಜೈನ್ (Vishnu Shankar Jain) ಪ್ರಶ್ನಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಹಿಂದೂಗಳು (Hindu) ಈ ಹಿಂದೆ ವಕ್ಫ್ ಮಂಡಳಿಯ ಬಗ್ಗೆ ಅರ್ಜಿ ಸಲ್ಲಿಸಿದಾಗ ಸುಪ್ರೀಂ ಕೋರ್ಟ್ ಇಲ್ಲಿ ಯಾಕೆ ನೇರವಾಗಿ ಅರ್ಜಿ ಸಲ್ಲಿಸಿದ್ದೀರಿ. ಹೈಕೋರ್ಟ್‌ಗೆ (High Court) ಹೋಗಿ ಎಂದು ಸೂಚಿಸಿತ್ತು. ವಿವಿಧ ಹೈಕೋರ್ಟ್‌ಗಳಲ್ಲಿ 140 ಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿದ್ದರೂ ನಮಗೆ ಯಾವುದೇ ಮಧ್ಯಂತರ ಪರಿಹಾರ ಸಿಕ್ಕಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವಕ್ಫ್ ಮಂಡಳಿಗೆ ಸದಸ್ಯರ ನೇಮಕ ಮಾಡುವಂತಿಲ್ಲ, ಆಸ್ತಿಗಳ ವಿಚಾರದಲ್ಲೂ ಯಥಾಸ್ಥಿತಿ ಕಾಪಾಡಿ: ಸುಪ್ರೀಂ
#WATCH | Delhi | Advocate Vishnu Shankar Jain says, “When we filed a petition in the Supreme Court regarding the Waqf board, the Court asked us why we came directly to the Supreme Court and suggested that we should go to the High Courts, and we didn’t get any interim relief even… pic.twitter.com/jw2AfuWCvO
— ANI (@ANI) April 17, 2025
ಈಗ ಸುಪ್ರೀಂ ಕೋರ್ಟ್‌ಗೆ ಬೇರೆ ಬೇರೆ ಅರ್ಜಿಗಳು ಸಲ್ಲಿಕೆಯಾಗುತ್ತಿದೆ ಮತ್ತು ಅವುಗಳ ವಿಚಾರಣೆ ಸಹ ನಡೆಸುತ್ತಿದೆ. ಅಷ್ಟೇ ಅಲ್ಲದೇ ಮಧ್ಯಂತರ ಆದೇಶಕ್ಕೆ ಸಂಬಂಧಿಸಿದ ವಿಷಯಗಳನ್ನು ಸಹ ಹೇಳಿದೆ. ಕಳೆದ 13 ವರ್ಷಗಳಿಂದ ಹಿಂದೂ ದೇವಾಲಯಗಳ ಸ್ವಾಧೀನಕ್ಕೆ ಸಂಬಂಧಿಸಿದಂತೆ 4 ರಾಜ್ಯಗಳ ಹಿಂದೂಗಳ ದತ್ತಿ ಕಾಯ್ದೆಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ನಡೆಸಬೇಕು. ಅಂತಹ ಪ್ರಕರಣಗಳನ್ನು ನಾವು ವಿಚಾರಣೆ ಯಾಕೆ ನಡೆಸಬೇಕು ಎಂದು ಸುಪ್ರೀಂ ಪ್ರಶ್ನಿಸಿತ್ತು ಎಂದರು.
ನನ್ನ ಸಲಹೆಯೆಂದರೆ ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ದೇಶದಲ್ಲಿರುವ ಎಲ್ಲಾ ಪ್ರಕರಣಗಳನ್ನು ಒಂದೇ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಬೇಕು. ಇದಕ್ಕಾಗಿ 6 ತಿಂಗಳೊಳಗೆ ಪ್ರಕರಣಗಳನ್ನು ಆಲಿಸಲು ಸಾಂವಿಧಾನಿಕ ಪೀಠವನ್ನು ರಚಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ರೀಲ್ಸ್ ಕೇಸ್: ನಿನ್ನೆ ಜೈಲು ಪಾಲು – ಇಂದು ರಜತ್‌ಗೆ ಜಾಮೀನು
ಬುಧವಾರ ಸುಪ್ರೀಂನಲ್ಲಿ ನಡೆದ ವಿಚಾರಣೆ ವೇಳೆ ವಕೀಲ ಅಭಿಷೇಕ್ ಮನು ಸಿಂಗ್ವಿ, ಕಾಯ್ದೆಯು ದೇಶಾದ್ಯಂತ ವಕ್ಫ್ ಆಸ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಪ್ರಕರಣವನ್ನು ಹೈಕೋರ್ಟ್‌ಗೆ ವರ್ಗಾಯಿಸಬಾರದು. ಸುಪ್ರೀಂ ಕೋರ್ಟ್‌ನಲ್ಲಿಯೇ ವಿಚಾರಣೆ ನಡೆಯಬೇಕು ಎಂದು ಮನವಿ ಮಾಡಿದ್ದರು.
ಅಯೋಧ್ಯೆ ಪ್ರಕರಣದಲ್ಲಿ ವಿಷ್ಣು ಶಂಕರ್ ಜೈನ್ ಮತ್ತು ಅವರ ತಂದೆ ಅರ್ಜಿದಾರರ ವಾದಿಸಿದ್ದರು. ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಸ್ಥಾನ, ಕೃಷ್ಣಜನ್ಮಭೂಮಿ-ಶಾಹಿ ಈದ್ಗಾ (ಮಥುರಾ) ಮತ್ತು ಸಂಭಾಲ್ ವಿವಾದದಲ್ಲಿ ಹಿಂದೂ ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದಾರೆ.