ಕುಡ್ಲದ ಬೆಡಗಿ ಪೂಜಾ ಹೆಗ್ಡೆ (Pooja Hegde) ಪ್ರಸ್ತುತ ಸೂರ್ಯ (Suriya) ಜೊತೆಗಿನ ‘ರೆಟ್ರೋ’ (Retro) ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಸಂರ್ದಶನವೊಂದರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ
ಪೂಜಾ ಹೆಗ್ಡೆ ಸಂದರ್ಶನದಲ್ಲಿ ಮಾತನಾಡಿ, ನನ್ನ ಪೋಷಕರಿಂದ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಒತ್ತಡವಿದೆ. ನಾನು ಮೂಲತಃ ಕರ್ನಾಟಕದವಳು, ತುಳು ಹುಡುಗಿ. ಹಾಗಾಗಿ ನನ್ನ ಪೋಷಕರು ಆಗಾಗ ಕನ್ನಡದಲ್ಲಿ ಸಿನಿಮಾ (Kannada Films) ಮಾಡಲು ಹೇಳುತ್ತಾ ಇರುತ್ತಾರೆ. ಕನ್ನಡದಲ್ಲಿ ಹಲವು ಕಥೆಗಳನ್ನು ಈಗಾಗಲೇ ಕೇಳಿದ್ದೇನೆ. ಯಾವುದು ಇಷ್ಟವಾಗಿಲ್ಲ. ಉತ್ತಮ ಕಥೆ ಸಿಕ್ಕರೆ ಖಂಡಿತವಾಗಿಯೂ ಕನ್ನಡದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಕನ್ನಡ ಸಿನಿಮಾದಲ್ಲಿ ನಟಿಸುವ ಆಸಕ್ತಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಫ್ಯಾನ್ಸ್‌ಗೆ ಪತ್ರ ಬರೆದ ನಜ್ರಿಯಾ
ಅಂದಹಾಗೆ, ‘ರೆಟ್ರೋ’ ಸಿನಿಮಾ ಇದೇ ಮೇ 1ರಂದು ರಿಲೀಸ್ ಆಗಲಿದೆ. ಕನ್ನಡದ ಕೆವಿಎನ್ ಸಂಸ್ಥೆ ನಿರ್ಮಾಣದ ‘ಜನ ನಾಯಗನ್’ ಸಿನಿಮಾದಲ್ಲಿ ವಿಜಯ್ ದಳಪತಿಯೊಂದಿಗೆ ನಟಿಸುತ್ತಿದ್ದಾರೆ. ಮುಂದಿನ ವರ್ಷ ಜ.9ರಂದು ರಿಲೀಸ್ ಆಗಲಿದೆ.