ಚಂಡೀಗಢ: ಪತ್ನಿ ಮನೆ ಬಿಟ್ಟು ಹೋದ ಕೋಪಕ್ಕೆ ವ್ಯಕ್ತಿಯೊಬ್ಬ ತನ್ನ ನಾದಿಯನ್ನು ಹತ್ಯೆ ಮಾಡಿರುವ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ.
ಬಿಹಾರದ ಮುಂಗೇರ್ ಜಿಲ್ಲೆಯ ಮೋಹಿತ್ ಕುಮಾರ್ ಕೊಲೆ ಮಾಡಿದ ವ್ಯಕ್ತಿ. ಈತ ತನ್ನ 10 ವರ್ಷ ವಯಸ್ಸಿನ ನಾದಿನಿಯನ್ನು ಹತ್ಯೆ ಮಾಡಿ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ ಶಾಲು ಸುತ್ತಿ ಬಜ್ದೇರಾ ಚರಂಡಿಯಲ್ಲಿ ಬಿಸಾಡಿದ್ದ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನೆರವಿನಿಂದ ಪೊಲೀಸರು ನಂತರ ಶವವನ್ನು ಚರಂಡಿಯಿಂದ ಹೊರತೆಗೆದಿದ್ದಾರೆ. ಇದನ್ನೂ ಓದಿ: ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಬಿಬಿಎಂಪಿ ಲಾರಿ ಚಾಲಕ ಚಿಕಿತ್ಸೆ ಫಲಿಸದೇ ಸಾವು
ಬಾಲಕಿಯ ತಂದೆ ತನ್ನ ಕಿರಿಯ ಮಗಳು ಕಾಣೆಯಾಗಿದ್ದಾಳೆ ಎಂದು ಪಾಲಂ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ವೇಳೆ ಹಿರಿಯ ಮಗಳು ಮತ್ತು ಆಕೆಯ ಪತಿ ನಡುವೆ ಜಗಳ ಆಗಿದ್ದ ಬಗ್ಗೆ ಬಾಲಕಿ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಬಜ್‌ಗೇರಾದಿಂದ ಕುಮಾರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ಆಗ, ತನ್ನ ವೈವಾಹಿಕ ವಿವಾದದಲ್ಲಿ ಮಧ್ಯಪ್ರವೇಶಿಸದಿದ್ದಕ್ಕಾಗಿ ನಾದಿನಿಯನ್ನು ಕೊಂದಿದ್ದಾಗಿ ತಿಳಿಸಿದ್ದಾನೆ. ನನಗೆ ಮದುವೆಯಾಗಿ 6 ವರ್ಷಗಳಾಗಿವೆ. ಒಂದು ಮಗು ಕೂಡ ಇದೆ. ಆದರೆ, ನನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ. ಇದೇ ಕೋಪಕ್ಕೆ ಮಾವ ಮತ್ತು ಅತ್ತೆ ಮೇಲೂ ಸೇಡು ತೀರಿಸಿಕೊಳ್ಳಲು ಯೋಚಿಸಿದ್ದೆ ಎಂದು ಆರೋಪಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಬ್ಲೂ ಫಿಲ್ಮ್ ವೀಕ್ಷಣೆ, ಚಿತ್ರೀಕರಣ ಕಾನೂನುಬದ್ಧಗೊಳಿಸಲು ಮುಂದಾದ ಉಕ್ರೇನ್
ಆರೋಪಿ ಕುಮಾರ್ ತನ್ನ ನಾದಿನಿಯನ್ನು ಬೈಕ್‌ನಲ್ಲಿ ಬಜ್‌ಗೇರಾದಲ್ಲಿರುವ ತನ್ನ ಬಾಡಿಗೆ ಕೋಣೆಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಚರಂಡಿಗೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.