– ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ
ನವದೆಹಲಿ: ಕೆಲ ದಿನಗಳ ಹಿಂದೆಯಷ್ಟೇ ಮೀರತ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಪತಿಯನ್ನ ಕೊಂದು, ತುಂಡು ತುಂಡಾಗಿ ಕತ್ತರಿಸಿ ಸಿಮೆಂಟ್ ತುಂಬಿದ ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದ ಘಟನೆ ಬೆಳಕಿಗೆ ಬಂದಿತ್ತು. ಅದೇ ರೀತಿ ಮತ್ತೊಂದು ಪ್ರಕರಣ ಈಗ ಹರಿಯಾಣದ ಹಿಸಾರ್ (Haryana’s Hisar) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ರೀಲ್ಸ್ ಪ್ರಿಯನಿಗಾಗಿ (Reels Lover) ಮಹಿಳೆಯೊಬ್ಬಳು ದುಪ್ಪಟ್ಟಾದಿಂದ ತನ್ನ ಪತಿಯ ಕತ್ತುಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಇಬ್ಬರ ಕಳ್ಳಸಂಬಂಧ ಪತ್ತೆಹಚ್ಚಿದ ಬಳಿಕ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಮುಗಿಸಿದ್ದಾಳೆ ಪತ್ನಿ. ರವೀನಾ (32) ಮತ್ತು ಸುರೇಶ್ ಕೊಲೆ ಆರೋಪಿಗಳಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!
ಆಂಟಿಗೆ ಲವ್ ಹುಟ್ಟಿದ್ದು ಹೇಗೆ?
32 ವರ್ಷದ ರವೀನಾ ಮತ್ತು ರೀಲ್ಸ್ ಸ್ಟಾರ್ ಸುರೇಶ್ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪರಿಚಯವಾಗಿದ್ದರು. ಹರಿಯಾಣದ ಪ್ರೇಮ್‌ನಗರಲ್ಲಿ ಇಬ್ಬರು ಒಟ್ಟಿಗೇ ವಿಡಿಯೋ ಮಾಡಲು ಪ್ರಾರಂಭಿಸಿದ್ದರು. ಇದಕ್ಕೆ ರವೀನಾಳ ಪತಿ ಪ್ರವೀಣ್ ಮತ್ತು ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ರು. ಆದಾಗ್ಯೂ ಸುಮಾರು ಒಂದೂವರೆ ವರ್ಷಗಳ ಕಾಲ ಇಬ್ಬರು ಕಂಟೆಂಟ್ ಕ್ರಿಯೇಟ್ ಮಾಡುತ್ತಿದ್ದರು. ಇದರಿಂದ ಫಾಲೋವರ್ಸ್‌ಗಳ ಸಂಖ್ಯೆ 34,000ಕ್ಕೆ ತಲುಪಿತ್ತು. ಇದನ್ನೂ ಓದಿ: ತಾಲಿಬಾನ್ ಜೊತೆ ಪಾಕಿಸ್ತಾನ ಡಬಲ್ ಗೇಮ್ ಆಡುತ್ತಿದೆ: ಜೈಶಂಕರ್
ಬಳಿಕ ಇತರ ಕಲಾವಿದರನ್ನೂ ಸೇರಿಸಿಕೊಂಡು ರೀಲ್ಸ್ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ರೀಲ್ಸ್ ಮಾಡುತ್ತಲೇ ರವೀನಾ ಮತ್ತು ಸುರೇಶ್ ಚಕ್ಕಂದ ಆಡಲು ಶುರು ಮಾಡಿದ್ದರು. ಕಳೆದ ಮಾರ್ಚ್ 25ರಂದು ರವೀನಾಳ ಪತಿ ಪ್ರವೀಣ್ (35), ಇವರಿಬ್ಬರೂ ಅಕ್ರಮ ಸಂಬಂಧ ಇರುವುದನ್ನು ಪತ್ತೆಹಚ್ಚಿದ್ದ. ಹೀಗಾಗಿ ರವೀನಾ ತನ್ನ ಪ್ರಿಯಕರ ಸುರೇಶ್ ಜೊತೆ ಸೇರಿ ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಇದನ್ನೂ ಓದಿ: ಟ್ರಂಪ್ ಬೆದರಿಕೆ ನಡುವೆ ಭಾರತದ ಪ್ರಜೆಗಳಿಗೆ 85,000 ವೀಸಾ ನೀಡಿದ ಚೀನಾ
ಪ್ರವೀಣ್ ಎಲ್ಲಿದ್ದಾನೆ ಅಂತ ಮನೆಯವರು ಕೇಳಿದಾಗ ತನಗೇನು ಗೊತ್ತೇ ಇಲ್ಲವೆಂಬಂತೆ ರವೀನಾ ನಟಿಸಿದ್ದಾಳೆ. ಅದೇ ದಿನ ರಾತ್ರಿ 2:30ರ ಸುಮಾರಿಗೆ ಪ್ರಿಯಕರನ ಬೈಕ್‌ನಲ್ಲಿ (Lover Bike) ಪ್ರವೀಣ್ ಶವ ಸಾಗಿಸಿದ್ದಾಳೆ. ಹಿಸಾರ್‌ನರುವ ತನ್ನ ಮನೆಯಿಂದ 6 ಕಿಮೀ ದೂರದಲ್ಲಿರುವ ದಿನೊಡ್ ರಸ್ತೆ ಬಳಿಯ ಚರಂಡಿಗೆ ಶವ ಎಸೆದುಬಂದಿದ್ದಾಳೆ. ಕಳೆದ ಮಾರ್ಚ್ 28ರಂದು ಪೊಲೀಸರಿಗೆ ಪ್ರವೀಣ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ಬೆಂಗ್ಳೂರಿಗೆ ಸೆಡ್ಡು ಹೊಡೆಯಲು ಆಂಧ್ರ ಸರ್ಕಾರದಿಂದ ಭಾರೀ ಆಫರ್ – ಟಿಸಿಎಸ್‌ಗೆ 99 ಪೈಸೆಗೆ 21 ಎಕ್ರೆ ಭೂಮಿ
ಬಳಿಕ ಆಕೆಯ ಮನೆಯ ರಸ್ತೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ರವೀನಾ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಂದಿಗೆ ತನ್ನ ಮುಖಮುಚ್ಚಿಕೊಂಡು ಶವ ಸಾಗಿದ್ದಾಳೆ. 2 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗುವಾಗ ಬೈಕ್‌ನಲ್ಲಿ ಇಬ್ಬರೇ ಬಂದಿದ್ದಾರೆ. ಈ ವೇಳೆ ಮಧ್ಯದಲ್ಲಿದ್ದ ಮೃತದೇಹ ನಾಪತ್ತೆಯಾಗಿತ್ತು. ಬಳಿಕ ಮಾಹಿತಿ ಖಚಿತಪಡಿಸಿಕೊಂಡ ಪೊಲೀಸರು ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. ರವೀನಾ ಮತ್ತು ಪ್ರವೀಣ್‌ಗೆ 6 ವರ್ಷದ ಮಗ ಇದ್ದು, ತನ್ನ ಅಜ್ಜನೊಂದಿಗೆ ವಾಸಿಸುತ್ತಿದ್ದಾನೆ.