ಕಿರುತೆರೆಯ ಜನಪ್ರಿಯ ‘ರಾಮಾಚಾರಿ’ (Ramachari Serial) ಸೀರಿಯಲ್ ನಟಿ ಚಾರು ಅಲಿಯಾಸ್ ಮೌನ ಗುಡ್ಡೆಮನೆ (Mouna Guddemane) ಹಾಟ್ ಅವತಾರ ತಾಳಿದ್ದಾರೆ. ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
‘ರಾಮಾಚಾರಿ’ ಸೀರಿಯಲ್‌ನ (Ramachari Serial) ಶುರುವಿನಲ್ಲಿ ಚಾರು ಪಾತ್ರ ಬೋಲ್ಡ್ ಆಗಿತ್ತು. ಆ ನಂತರ ಸೀರೆ ಗೆಟಪ್‌ನಲ್ಲಿ ನಟಿ ಮೌನ ಕಾಣಿಸಿಕೊಳ್ಳುತ್ತಿದ್ದರು. ಈಗ ದಿಢೀರ್ ಅಂತ ನಟಿ ಹಾಟ್ ಅವತಾರ ತಾಳಿದ್ದಾರೆ. ಈ ಲುಕ್ ಪಡ್ಡೆಹುಡುಗರಿಗೂ ಖುಷಿ ಕೊಟ್ಟಿದೆ. ಇದನ್ನೂ ಓದಿ:‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ
ಕಪ್ಪು ಬಣ್ಣದ ಮಿಸಿ ಡ್ರೆಸ್ ಧರಿಸಿ ನಟಿ ಮಿಂಚಿದ್ದಾರೆ. ಕೈಯಲ್ಲಿ ಕೂಲ್ ಡ್ರಿಂಕ್ಸ್ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ಮಾದಕ ಅವತಾರಕ್ಕೆ ಬ್ಲ್ಯಾಕ್ ಬ್ಯೂಟಿ, ಸಖತ್, ಹಾಟ್ ಎಂದೆಲ್ಲಾ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ: ರಕ್ಷಕ್ ಕೊಟ್ಟ ಬರ್ತ್‌ಡೇ ಸರ್ಪ್ರೈಸ್‌ಗೆ ನಮ್ರತಾ ಗೌಡ ಕಣ್ಣೀರು
‘ರಾಮಾಚಾರಿ’ ಸೀರಿಯಲ್‌ನಲ್ಲಿ ಬ್ಯುಸಿಯಾಗಿರುವಾಗಲೇ ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜುಲೈ 18ರಂದು ಸಿನಿಮಾ ರಿಲೀಸ್ ಆಗಲಿದೆ.
‘ರಾಮಾಚಾರಿ’ಯ ಚಾರು ಆಗಿ ಗೆದ್ದ ಮೌನಗೆ ಸಿನಿಮಾದಿಂದ ಬ್ರೇಕ್ ಸಿಗಲಿದೆಯಾ. ಬೆಳ್ಳಿಪರದೆಯಲ್ಲೂ ನಾಯಕಿಯಾಗಿ ಸದ್ದು ಮಾಡ್ತಾರಾ? ಕಾಯಬೇಕಿದೆ.