ಬೆಂಗಳೂರು: ಹಿರಿಯ ಪತ್ರಕರ್ತ ಎಸ್.ಕೆ. ಶ್ಯಾಮ್‌ಸುಂದರ್ (SK Shyamsundar) ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ಯಾಮ್‌ಸುಂದರ್ ಅವರನ್ನು ವಿದ್ಯಾಪೀಠ ಸರ್ಕಲ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಶ್ಯಾಮ್‌ಸುಂದರ್ ಡಿಜಿಟಲ್ ಪತ್ರಿಕೋದ್ಯಮಕ್ಕೆ (Digital journalism) ಹೊಸ ದಿಕ್ಕು ತೋರಿಸಿದ್ದರು. ಪಬ್ಲಿಕ್ ಟಿವಿ ಆರಂಭದಲ್ಲಿ ಬೆಳಗ್ಗೆಯ ನ್ಯೂಸ್ ಕೆಫೆ ಶೋ ನಡೆಸಿಕೊಟ್ಟಿದ್ದರು.
ಅವಿವಾಹಿತರಾಗಿದ್ದ ಶ್ಯಾಮ್‌ಸುಂದರ್ ಅವರು ಎದ್ದೇಳು ಮಂಜುನಾಥ ಸಿನಿಮಾದಲ್ಲಿ ಬ್ಯಾಂಕ್ ಮ್ಯಾನೇಜರ್ ಪಾತ್ರವನ್ನೂ ನಿರ್ವಹಿಸಿದ್ದರು. ಪತ್ರಕರ್ತರ ಬಳಗದಲ್ಲಿ ಶಾಮಿ ಎಂದೇ ಪ್ರಸಿದ್ಧಿ ಪಡೆದಿದ್ದರು.