ಹಾವೇರಿ: ಜಾತಿ ಜನಗಣತಿಯು (Caste Census) ಯಾವುದೇ ಒಂದು ಸಮಾಜದ ಪರ ಅಥವಾ ವಿರೋಧ ನಿರ್ಣಯ ಮಾಡುವುದಲ್ಲ. ಎಲ್ಲರ ವಿಚಾರಗಳ ಒಳಗೊಂಡು ದೇಶ ನಡೆಸಬೇಕಾಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿದರು.
ಹಾವೇರಿಯಲ್ಲಿ (Haveri) ಮಾಧ್ಯಮದವರೊಂದಿಗೆ ಜಾತಿ ಜನಗಣತಿ ವರದಿಯಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಿಸುವ ಷಡ್ಯಂತ್ರ ನಡೆದಿದೆ ಎಂಬ ಆರೋಪದ ಕುರಿತು ಮಾತನಾಡಿದರು. ಎಲ್ಲರ ವಿಚಾರ ಒಳಗೊಂಡು ದೇಶ ನಡೆಸಬೇಕಾಗುತ್ತದೆ. ಇದರ ಜವಾಬ್ದಾರಿಯು ಸಿಎಂ ಹಾಗೂ ಪ್ರಧಾನಿಯವರ ಮೇಲೂ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ಇನ್ನೊಂದು ವರ್ಷವಷ್ಟೇ ಪ್ರಧಾನಿಯಾಗಿರುತ್ತಾರೆ: ಸಂತೋಷ್ ಲಾಡ್
75 ವರ್ಷ ಆಯ್ತು, ಜಾತಿ ವಿಚಾರವಾಗಿ ರಾಜಕಾರಣ ಮಾಡುವುದರಲ್ಲಿ ಅರ್ಥ ಇಲ್ಲ. ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಯಾರು ಹಿಂದುಳಿದಿದ್ದಾರೋ ಅವರಿಗೆ ಆದ್ಯತೆ ಕೊಡಲೇಬೇಕು. ಅದು ಯಾವುದೇ ಜಾತಿ ಇರಲಿ. ಇಂದಿನ ಮಟ್ಟಿಗೆ ಆ ವಿಚಾರ ಕೂಡಾ ಪ್ರಸ್ತುತವಾಗಿದೆ ಎಂದರು. ಇದನ್ನೂ ಓದಿ: ಮೋದಿ ಪ್ರಧಾನಿಯಾಗಬೇಕೆಂದು ಬರಿಗಾಲಲ್ಲಿ ನಡೆದಾಡುವ ಪ್ರತಿಜ್ಞೆ – 14 ವರ್ಷದ ಕನಸು ಕೊನೆಗೂ ನನಸು
ಜಾತಿ ಗಣತಿ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಅಂಗೀಕಾರ ಮಾಡುವ ಬಗ್ಗೆ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಎಲ್ಲರ ಅಭಿಪ್ರಾಯ ಆಧರಿಸಿಯೇ ನಿರ್ಣಯ ತೆಗೆದುಕೊಳ್ಳಲಾಗುವುದು. ವರದಿ ಬಗ್ಗೆ ಪುನರ್ ವಿಮರ್ಶೆ ಮಾಡಬಹುದು. ಸಾಧಕ ಬಾಧಕಗಳ ಕುರಿತು ಚರ್ಚೆ ಆಗುತ್ತವೆ ಎಂದು ಹೇಳಿದರು.