ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಕರ್ಬೂಜ ಜ್ಯೂಸ್ ಕುಡಿಯಿರಿ!

Public TV
1 Min Read
Muskmelon Juice 2

ಬೇಸಿಗೆಯಲ್ಲಿ ಜನರು ತಮ್ಮ ದಾಹವನ್ನು ತೀರಿಸಿಕೊಳ್ಳಲು ಹೆಚ್ಚಾಗಿ ಜ್ಯೂಸ್‌ಗಳ ಮೊರೆಹೋಗುತ್ತಾರೆ. ಬೇಸಿಗೆಯಲ್ಲಿ ಸೇಲ್ ಆಗುವ ಜ್ಯೂಸ್‌ಗಳ ಪೈಕಿ ಕರ್ಬೂಜ ಜ್ಯೂಸ್ ಕೂಡ ಒಂದು. ಇದು ನಮ್ಮ ದೇಹವನ್ನು ತಂಪಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ರಕ್ತದೊತ್ತಡ ನಿಯಂತ್ರಿಸುವಲ್ಲಿ ಸಹಕಾರಿ ಕೂಡ. ಹಾಗಿದ್ರೆ ಸುಲಭವಾಗಿ ರುಚಿಕರ ಹಾಗೂ ಆರೋಗ್ಯಕರ ಕರ್ಬೂಜ ಜ್ಯೂಸ್ ಯಾವ ರೀತಿ ಮಾಡುವುದು ಎಂಬುದನ್ನು ನಾವು ಇಂದು ತಿಳಿಸಿಕೊಡುತ್ತೇವೆ.

Muskmelon Juice 1

ಬೇಕಾಗುವ ಸಾಮಗ್ರಿಗಳು:
ಕರ್ಬೂಜ – 1 ಕಪ್
ಹಾಲು – 1 ಕಪ್
ಸಕ್ಕರೆ/ಬೆಲ್ಲ – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಷ್ಟು

Muskmelon Juice 3

ಮಾಡುವ ವಿಧಾನ:
*ಮೊದಲಿಗೆ ಬೀಜ ತೆಗೆದ ಕರ್ಬೂಜ ಹಣ್ಣನ್ನು ಮಿಕ್ಸರ್ ಜಾರಿಗೆ ಹಾಕಿ.
*ಬಳಿಕ ಅದಕ್ಕೆ 1 ಕಪ್ ಹಾಲು ಹಾಕಿ.
*ನಂತರ ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು ಹಾಗೂ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
*ಬಳಿಕ ರುಬ್ಬಿದ ಜ್ಯೂಸ್ ಅನ್ನು ಗ್ಲಾಸ್‌ಗೆ ವರ್ಗಾಯಿಸಿಕೊಳ್ಳಿ.
*ಈಗ ತಂಪಾದ ಕರ್ಬೂಜ ಜ್ಯೂಸ್ ಕುಡಿಯಲು ಸಿದ್ಧ.
*ಸಣ್ಣದಾಗಿ ಹೆಚ್ಚಿದ ಡ್ರೈಫ್ರೂಟ್ಸ್‌ನಿಂದ ಜ್ಯೂಸ್ ಅನ್ನು ಅಲಂಕರಿಸಬಹುದು.

Share This Article