ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ‘ಕೆಜಿಎಫ್ ಚಾಪ್ಟರ್ 2’ (KGF 2) ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಏ.14) ಮೂರು ವರ್ಷಗಳಾಗಿದೆ. ಈ ದಿನ ಫ್ಯಾನ್ಸ್‌ಗೆ ‘ಕೆಜಿಎಫ್ 3’ (KGF 3) ಬರೋದಾಗಿ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಅನೌನ್ಸ್ ಮಾಡಿ ಗುಡ್ ನ್ಯೂಸ್ ಕೊಟ್ಟಿದೆ. ಇದನ್ನೂ ಓದಿ:ಮೊಮ್ಮಗಳ ಬಗ್ಗೆ ಭಾವನಾತ್ಮಕ ನೋಟ್ ಬರೆದ ಅಜ್ಜ ಸುನಿಲ್ ಶೆಟ್ಟಿ
‘ಕೆಜಿಎಫ್ 2’ ಚಿತ್ರ ಬಿಡುಗಡೆಯಾಗಿ 3 ವರ್ಷಗಳಾಗಿವೆ. ಈ ಹಿನ್ನೆಲೆ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ‘ಕೆಜಿಎಫ್ ಚಾಪ್ಟರ್ 3’ ಫಿಕ್ಸ್ ಎಂದು ಘೋಷಿಸಿದೆ. ಈ ಚಿತ್ರ ಬಾಕ್ಸಾಫೀಸ್ ಧೂಳಿಪಟ ಮಾಡಿದ್ದಲ್ಲದೇ ಗಡಿಯನ್ನೂ ಮೀರಿ ಬೆಳೆದಿದೆ. ಸಿನಿಮಾ ಪ್ರಪಂಚದಾದ್ಯಂತ ‘ಕೆಜಿಎಫ್’ ಚಿತ್ರವನ್ನು ಸೆಲೆಬ್ರೇಟ್ ಮಾಡ್ತಿರುವಾಗ ಮುಂದಿನ ಅಧ್ಯಾಯದ ನಿರೀಕ್ಷೆ ಬಲವಾಗಿದೆ. ‘ಕೆಜಿಎಫ್ 3’ ಮೇಲಿನ ನಿಮ್ಮ ನಿರೀಕ್ಷೆಯನ್ನ ಸುಳ್ಳು ಮಾಡೋದಿಲ್ಲ. ರಾಕಿ ಭಾಯ್ ಪರಂಪರೆ ಜೀವಂತವಾಗಿದೆ ಮತ್ತು ಜಗತ್ತು ವೀಕ್ಷಿಸುತ್ತಿದೆ. ಮುಂದಿನ ಅಧ್ಯಾಯಕ್ಕಾಗಿ ಕಾಯ್ತಿರಿ ಎಂದು ಹೊಂಬಾಳೆ ಸಂಸ್ಥೆ ಸಂದೇಶ ಕೊಟ್ಟಿದೆ. ‘ಕೆಜಿಎಫ್ 2’ ಚಿತ್ರದ 3ನೇ ಆ್ಯನಿವರ್ಸರಿಗೆ ಚಾಪ್ಟರ್ 3ರನ್ನು ಅಧಿಕೃತವಾಗಿ ಘೋಷಿಸಿ ಗುಡ್ ನ್ಯೂಸ್ ಕೊಟ್ಟಿದೆ. ಇದನ್ನು ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಅಂದಹಾಗೆ, ಪ್ರಶಾಂತ್ ನೀಲ್ (Prashanth Neel) ನಿರ್ದೇಶದ ಈ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ಅಡಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದರು. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಭುವನ್ ಗೌಡ ಅವರ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರದ ಹೈಲೈಟ್ಸ್ ಆಗಿತ್ತು. ಗಟ್ಟಿ ತಾಂತ್ರಿಕ ಬಳಗದ ಜತೆಗೆ ಘಟಾನುಘಟಿ ಪಾತ್ರವರ್ಗವನ್ನೂ ಹೊಂದಿರುವ ಈ ಸಿನಿಮಾದಲ್ಲಿ ಯಶ್ ಜೊತೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಸಹ ಮೋಡಿ ಮಾಡಿದ್ದರು. ಇದನ್ನೂ ಓದಿ:ಮನೆಗೆ ನುಗ್ಗಿ, ಕಾರು ಸ್ಫೋಟಿಸಿ ಕೊಲೆ ಮಾಡುವುದಾಗಿ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ
ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಈ ಸಿನಿಮಾ ಹತ್ತಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿಯೂ ಹಾರಿಸಿದೆ ಕೆಜಿಎಫ್ ಚಾಪ್ಟರ್ 2 ಸಿನಿಮಾ. ಇದೀಗ ‘ಕೆಜಿಎಫ್ ಚಾಪ್ಟರ್ 3’ (KGF 3) ಮೇಲೆ ಸಿನಿ ಪ್ರಿಯರ ದೃಷ್ಟಿ ನೆಟ್ಟಿದೆ. ಅದರ ಬಗ್ಗೆಯೂ ಶೀಘ್ರದಲ್ಲಿ ಹೊಂಬಾಳೆ ಫಿಲ್ಮ್ಸ್ (Hombale Films) ಅಪ್‌ಡೇಟ್ ನೀಡಲಿದೆ.