– ವರದಿ ಓದದೇ ಅವೈಜ್ಞಾನಿಕ ಅಂದ್ರೆ ಹೇಗೆ? ಎಂದು ಸಚಿವರ ಪ್ರಶ್ನೆ
– ಮುಸ್ಲಿಮರು ಮುಸ್ಲಿಂ ಅಂತ ಬರೆದುಕೊಟ್ಟಿದ್ದಾರೆ
ಗದಗ: ಜಾತಿ ಜನಗಣತಿ ಅವೈಜ್ಞಾನಿಕ ಹೇಗೆ ಆಗುತ್ತದೆ. ಅವೈಜ್ಞಾನಿಕ, ತಪ್ಪು ವರದಿ, ಯಾರೋ ಹೇಳಿ ಬರೆಸಿದ್ದಾರೆ ಎಂಬ ಮಾತುಗಳು ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ. ಇವೆಲ್ಲಾ ಸಮಾಜ ದ್ರೋಹಿ ಮಾತುಗಳು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ (H K Patil) ಹೇಳಿದರು.
ಗದಗದಲ್ಲಿ (Gadag) ಮಾಧ್ಯಮಗಳೊಂದಿಗೆ ಜಾತಿ ಜನಗಣತಿ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಹೇಳಿಕೆ ಕುರಿತು ಅವರು ಮಾತನಾಡಿದರು. ಜಾತಿಗಣತಿ (Caste Census) ವಿವರಗಳು ಬಹುತೇಕ ಬಹಿರಂಗಗೊಂಡಿವೆ. ನಮಗೂ ಅದರ ಪ್ರತಿಗಳು ದೊರೆತಿವೆ. ಏ.17ರಂದು ವಿಶೇಷ ಕ್ಯಾಬಿನೆಟ್ ಸಭೆ ಕರೆಯಲಾಗಿದೆ. ಇದರಲ್ಲಿ ರಾಜಕಾರಣ ಮಾಡಲು ಹೋಗಬಾರದು. ಸಮೀಕ್ಷೆಗಳು ಏನಿವೆ ಎಂಬುದು ಗೊತ್ತಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಇದು ಜಾತ್ಯಾತೀತ ರಾಷ್ಟ್ರ, ಜಾತಿಗಣತಿಗೆ ಯಾವುದೇ ಮಹತ್ವ ಇಲ್ಲ: ಡಾ.ಮಂಜುನಾಥ್
ಸರ್ಕಾರ ಇನ್ನೂ ಏನು ನಿರ್ಣಯ ಮಾಡಿಲ್ಲ. ಏನು ಸಮೀಕ್ಷೆ ಆಗಿದೆ ಅದನ್ನು ನಾವು ಮಂಡನೆ ಮಾಡಿದ್ದೇವೆ. ಸಿದ್ದರಾಮಯ್ಯ (Siddaramaiah) ಅವರ ಮನೆಯಲ್ಲಿ ಜಾತಿ ಗಣತಿ ಬರೆದಿದ್ದಾರೆ ಎಂದು ಆರ್. ಅಶೋಕ್ (R Ashok) ಹೇಳಿದ್ದಾರೆ. ಯಾವುದಾದರೂ ವರದಿ ಮುಖ್ಯಮಂತ್ರಿ ಮನೆಯಲ್ಲಿ ಬರೆಯಲು ಸಾಧ್ಯನಾ. ಅದರಲ್ಲಿ ತಕರಾರು ಇದ್ದರೆ, ಹೀಗೆ ಮಾಡಿಲ್ಲ. ಹೀಗೆ ಮಾಡಿ ಎಂಬ ಅಭಿಪ್ರಾಯ ಸೂಚಿಸಿರಿ. ಅದನ್ನು ಸರಿಪಡಿಸುವುದು ಇದ್ದರೆ ಮಾಡುತ್ತೇವೆ ಎಂದರು. ಇದನ್ನೂ ಓದಿ: SRH ತಂಡ ಉಳಿದುಕೊಂಡಿದ್ದ ಹೈದರಾಬಾದ್ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಸರ್ಕಾರ ಇಷ್ಟೆಲ್ಲಾ ಅವಕಾಶ ಕೊಟ್ಟಾಗಲೂ ರಾಜಕೀಯ ಮಾಡುವುದು ಸರಿಯಾದ ಕ್ರಮವಲ್ಲ. ಅವೈಜ್ಞಾನಿಕ ಯಾವುದು ಇದೆ. ವರದಿ ಓದದೇ ಅವೈಜ್ಞಾನಿಕ ಅಂದ್ರೆ ಹೇಗೆ? ನಿಮ್ಮ ಮನೆಗಳಲ್ಲಿ ಗಣತಿ ಮಾಡಿದ್ದರೆ ನಮ್ಮದು ಈ ಜಾತಿ ಅಂತ ಅದಕ್ಕೆ ನಿಮ್ಮ ಸಹಿ ಇದೆ. ಹೀಗಾಗಿ ಅದು ಹೇಗೆ ಅವೈಜ್ಞಾನಿಕ ಆಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಾತಿಗಣತಿ ಹೊರಗಡೆ ತರಲು ಕಷ್ಟ, ಆದ್ರೂ ಸಿಎಂ ತಂದಿದ್ದಾರೆ: ಪರಮೇಶ್ವರ್
ಇನ್ನೂ ಜಾತಿಗಣತಿ ಬಗ್ಗೆ ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ ವಿಚಾರದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಏನು ಬದ್ಧತೆ ಇದೆ. ಆ ಬದ್ಧತೆಯನ್ನು ಸಿಎಂ ಅಭಿವ್ಯಕ್ತ ಮಾಡಿದ್ದಾರೆ. ಸಿಎಂ ರಾಜಕೀಯ ಲಾಭ-ನಷ್ಟ ಲೆಕ್ಕ ಹಾಕಿಲ್ಲ ಎಂದರು. ಇದನ್ನೂ ಓದಿ: ಮುಸ್ಲಿಮರು ಜಾಸ್ತಿಯಿದ್ದರೆ ಅಲ್ಪಸಂಖ್ಯಾತರಲ್ಲ ಎಂದು ಘೋಷಿಸಿ: ಛಲವಾದಿ ನಾರಾಯಣಸ್ವಾಮಿ ಸವಾಲ್
ಜಾತಿ-ಉಪಜಾತಿಗಳ ವಿಂಗಡನೆ ಮಾಡಿದ್ದು, ಮುಸ್ಲಿಂ ವಿಂಗಡನೆ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರು ಮುಸ್ಲಿಂ ಅಂತ ಬರೆದುಕೊಟ್ಟಿದ್ದಾರೆ. ನಿಮ್ಮ ಜಾತಿ ಯಾವುದು ಎಂಬುದನ್ನು ನೀವೇ ಬರೆದು ಕೊಟ್ಟಿದ್ದಿರಲ್ಲ. ನೀವೇ ಜಾತಿ-ಉಪಜಾತಿಗಳನ್ನು ವಿಂಗಡನೆ ಮಾಡಿಕೊಂಡರೇ ಯಾರು ಏನು ಮಾಡಬೇಕು. ನೀವೇ ಹೇಳಿದ್ದನ್ನು ತೆಗೆದುಕೊಂಡರೇ ಅದು ಅವೈಜ್ಞಾನಿಕನಾ ಎಂದು ಬಿಜೆಪಿ ನಾಯಕರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವಕ್ಫ್ ಹೆಸ್ರಲ್ಲಿ ಬಡವರ ಭೂಮಿ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಲೂಟಿ ನಿಲ್ಲಲಿದೆ – ನರೇಂದ್ರ ಮೋದಿ
ಪೊಲೀಸರು ಆತ್ಮರಕ್ಷಣೆಗಾಗಿ ಒಳ್ಳೇ ಹೆಜ್ಜೆ ಇಟ್ಟಿದ್ದಾರೆ
ಹುಬ್ಬಳ್ಳಿ (Hubballi) ಬಾಲಕಿ ಸಾವು ಪ್ರಕರಣದ ಕುರಿತು ಮಾತನಾಡಿದ ಅವರು, ಹುಬ್ಬಳ್ಳಿ ಬಾಲಕಿಯದ್ದು ಅತ್ಯಂತ ದುರ್ದೈವದ ಘಟನೆಯಾಗಿದೆ. ಮನುಷ್ಯನಂತೆ ವರ್ತನೆ ಮಾಡದೇ ಇದ್ದ ವ್ಯಕ್ತಿ, ಪೊಲೀಸರ ಮೇಲೆಯೂ ಹಲ್ಲೆ ಮಾಡಲು ಹೋಗಿದ್ದ. ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ ಒಂದು ಒಳ್ಳೇ ಹೆಜ್ಜೆ ಇಟ್ಟಿದ್ದಾರೆ. ಸಮಾಜದಲ್ಲಿ ಇಂತಹ ಘಟನೆಗಳು ಆಗುವುದು ನಿಲ್ಲಬೇಕು. ಅಂತಹ ಸಮಾಜವನ್ನು ನಾವು ಕಟ್ಟಬೇಕಿದೆ ಎಂದು ಹೇಳಿದರು.