WhatsApp Down: ಮೆಸೇಜ್‌ ಸೆಂಡಿಂಗ್‌, ಸ್ಟೇಟಸ್‌ ಅಪ್ಲೋಡ್‌ ಸಮಸ್ಯೆ ಅನುಭವಿಸಿದ ಬಳಕೆದಾರರು

Public TV
2 Min Read
whatsapp

ನವದೆಹಲಿ: ಡಿಜಿಟಲ್‌ ಪೇಮೆಂಟ್‌ ಆಯ್ತು, ಈಗ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ವಾಟ್ಸಪ್‌ನಲ್ಲಿ (Whatsapp Down) ವ್ಯತ್ಯಯ ಕಂಡುಬಂದಿದೆ. ವಾಟ್ಸಪ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ.. ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಕೆಲವು ಬಳಕೆದಾರರು ದೂರಿದ್ದಾರೆ.

ಇಂದು ಸಂಜೆ ಮೆಟಾ-ಮಾಲೀಕತ್ವದ ಅಪ್ಲಿಕೇಶನ್‌ನಲ್ಲಿ ತಮ್ಮ ಸ್ಟೇಟಸ್‌ಗಳನ್ನು ಅಪ್‌ಲೋಡ್ ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ಸಮಸ್ಯೆಯಾಗುತ್ತಿದೆ ಎಂದು ಬಳಕೆದಾರರು ವರದಿ ಮಾಡಿದ್ದಾರೆ. ಇದನ್ನೂ ಓದಿ: UPI Down | ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ವ್ಯತ್ಯಯ – ಬ್ಯಾಂಕಿಂಗ್‌ ಸೇವೆಗಳ ಮೇಲೂ ಪರಿಣಾಮ

ಬಳಕೆದಾರರು ಸಲ್ಲಿಸಿದ ದೋಷಗಳು ಸೇರಿದಂತೆ ಹಲವಾರು ಮೂಲಗಳಿಂದ ಸ್ಥಿತಿ ವರದಿಗಳನ್ನು ಒಟ್ಟುಗೂಡಿಸಿ ಸ್ಥಗಿತಗಳನ್ನು ಪತ್ತೆಹಚ್ಚುವ ಡೌನ್‌ಡೆಕ್ಟರ್ ಪ್ರಕಾರ, ಸಂಜೆ 5:13 ರವರೆಗೆ ವಾಟ್ಸಾಪ್ ವಿರುದ್ಧ ಕನಿಷ್ಠ 463 ದೂರುಗಳು ದಾಖಲಾಗಿವೆ. 80% ಕ್ಕಿಂತ ಹೆಚ್ಚು ದೂರುಗಳು ಸಂದೇಶಗಳನ್ನು ಕಳುಹಿಸುವುದಕ್ಕೆ ಸಂಬಂಧಿಸಿವೆ. 15% ಜನರು ಅಪ್ಲಿಕೇಶನ್‌ನಲ್ಲಿ ತೊಂದರೆಗಳನ್ನು ಅನುಭವಿಸಿದ್ದಾರೆ. 4% ಲಾಗಿನ್ ಸಮಯದಲ್ಲಿ ತೊಂದರೆಗಳನ್ನು ಅನುಭವಿಸಿದ್ದಾರೆ.

ಕೆಲವು ಬಳಕೆದಾರರು ತಮ್ಮ ಸ್ಟೇಟಸ್‌ಗಳನ್ನು ವಾಟ್ಸಾಪ್‌ನಲ್ಲಿ ಅಪ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ ಎಂದು ದೂರಿದ್ದಾರೆ. ಇತರರು ಗ್ರೂಪ್‌ಗಳಲ್ಲಿ ಸಂದೇಶಗಳನ್ನು ಕಳುಹಿಸುವಾಗ ಸಮಸ್ಯೆಯಾಗಿದೆ ಎಂದು ವರದಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ #Whatsappdown ಚರ್ಚೆ ಟ್ರೆಂಡಿಂಗ್‌ ಆಯಿತು.

‘ಇದು ನನ್ನದು ಮಾತ್ರವೇ ಅಥವಾ ನಿಮ್ಮ ವಾಟ್ಸಾಪ್ ಕೂಡ ಡೌನ್ ಆಗಿದೆಯೇ? ನಾನು ಸ್ಟೇಟಸ್ ಅಪ್‌ಲೋಡ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅಪ್ಲೋಡ್‌ ಆಗೋದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತಿದೆ’ ಎಂದು ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಸಮಸ್ಯೆ ಹೇಳಿಕೊಂಡಿದ್ದಾರೆ. ಹೀಗೆ ಅನೇಕರು, ವಾಟ್ಸಪ್‌ ಬಳಕೆ ವೇಳೆ ತಾವು ಅನುಭವಿಸಿದ ಸಮಸ್ಯೆಗಳ ಬಗ್ಗೆ ಎಕ್ಸ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದಕ್ಕೆ ಅನೇಕರು ಕಾಮೆಂಟ್‌ ಮಾಡಿ, ‘ನಾವು ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ಗೆಸ್ಟ್‌ ಹೌಸ್‌ನಲ್ಲಿ ಮಹಿಳೆ ಸ್ನಾನ ಮಾಡುವ ವೀಡಿಯೋ ಸೆರೆ ಹಿಡಿದವ ಅರೆಸ್ಟ್‌

Share This Article