ಕುಡಿಯಲು ಹಣ ಕೊಡಲಿಲ್ಲ ಅಂತ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

Public TV
1 Min Read
Bengaluru

ಬೆಂಗಳೂರು: ಕತ್ತೆಗೆ ವಯಸ್ಸಾದಂತೆ ವಯಸ್ಸಾದ್ರು ಎಣ್ಣೆ (Drinks) ಕುಡಿಯಲು ವೃದ್ಧ ತಾಯಿಯ ಬಳಿ ಪ್ರತಿದಿನ ಹಣ ಕೇಳ್ತಿದ್ದ. ಆ ತಾಯಿ ತಾನೆ ಎಲ್ಲಿಂದ ಹಣ ತಂದು ಕೊಡಬೇಕು. ಇವತ್ತು ಹಣ ಕೊಡಲಿಲ್ಲ ಅಂತ 82 ವರ್ಷದ ವೃದ್ಧ ತಾಯಿಯನ್ನ ಪಾಪಿ ಮಗ ಹತ್ಯೆ ಮಾಡಿದ್ದಾನೆ.

ವೃದ್ಧ ತಾಯಿಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾದ ಪಾಪಿ ಮಗ, ಕುಡಿಯಲು ಹಣ ಕೊಡಲಿಲ್ಲ ಅಂತ 82 ವರ್ಷದ ವೃದ್ಧ ತಾಯಿಯನ್ನು ಹತ್ಯೆ ಮಾಡಿದ್ದಾನೆ. 82 ವರ್ಷದ ಶಾಂತಾಬಾಯಿ ಕೊಲೆಯಾದ (Murder) ತಾಯಿ. ಇನ್ನು ಕೊಲೆ ಹಂತಕ ಮಗ 52 ವರ್ಷದ ಈ ಮಹೆಂದ್ರ ಸಿಂಗ್‌. ಬಗಲಗುಂಟೆಯ ಮುನೇಶ್ವರ ನಗರದಲ್ಲಿ ನಿನ್ನೆ (ಗುರುವಾರ) ತಡರಾತ್ರಿ 1.30ಕ್ಕೆ ಕೊಲೆ ಮಾಡಿ ಮಗ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ

Crime

ಕುಡಿತದ ಚಟಕ್ಕೆ ಬಿದ್ದಿದ್ದ ಮಹೇಂದ್ರ ಸಿಂಗ್ ಕೆಲಸಕ್ಕೆ ಹೋಗದೇ ಅಲೆಯುತ್ತಿದ್ದನಂತೆ. ನಿತ್ಯ ಹಣಕ್ಕಾಗಿ ತಾಯಿಗೆ ಹಿಂಸೆ ಕೊಟ್ಟು, ನಿಂದಿಸುತ್ತಿದ್ದ. ಗುರುವಾರ ಹಣ ಕೊಡದೇ ಇದಿದ್ದಕ್ಕೆ ಕಿರಿಕ್ ತೆಗೆದು ಕಬ್ಬಿಣದ ರಾಡ್ ನಿಂದ (Iron Rod) ತಾಯಿಯ ತಲೆಗೆ ಹೊಡೆದು ಕೊಲೆ‌ಮಾಡಿ ತನ್ನ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಹೆಂಡತಿಯನ್ನು ಮನೆಗೆ ಕರೆದ ಗಂಡನಿಗೆ ಚಾಕು ಇರಿದ ಬಾಮೈದ!

ಈ ಬಗ್ಗೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ (Bagalagunte Police Station) ಪ್ರಕರಣ ದಾಖಲಾಗಿದ್ದು, ಹಂತಕ ಮಗನಿಗಾಗಿ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: ಜಾತಿಗಣತಿ ವರದಿ ಸೀಲ್ ಓಪನ್… ಕ್ಯಾಬಿನೆಟ್‌ನಲ್ಲಿ ಮಂಡನೆ; ಮುಂದಿನ‌ ಕ್ಯಾಬಿನೆಟ್‌ಗೆ ಕ್ಲೈಮ್ಯಾಕ್ಸ್..!

Share This Article