ದುಡ್ಡಿಲ್ಲ ಎಂದಿದ್ದಕ್ಕೆ ಕೆನ್ನೆಗೆ ಬಾರಿಸಿದ್ದ ನೇಪಾಳಿ ಮಂಜ – ಇದೇ ಸಿಟ್ಟಿಗೆ ನಡೆದಿತ್ತು ಮರ್ಡರ್!

Public TV
1 Min Read
Nepali Manja Murder Case 1 1

ಯುಗಾದಿ ದಿನವೇ ಕೊಲೆ – ಹಂತಕರು ಅರೆಸ್ಟ್

ಆನೇಕಲ್: ರೌಡಿಶೀಟರ್ ನೇಪಾಳಿ ಮಂಜನನ್ನು (Nepali Manja) ಹತ್ಯೆ ಮಾಡಿದ್ದ ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರು (Police) ಬಂಧಿಸಿದ್ದಾರೆ.

Nepali Manja Murder Case 1

ಬಂಧಿತ ಆರೋಪಿಗಳನ್ನು ಜಗದೀಶ್, ಮಹೇಶ್, ದಿನೇಶ್, ನಂದನ್, ಮಂಜುನಾಥ್, ರವಿ ಮತ್ತು ಬುಲೆಟ್ ಬಾಬು ಎಂದು ಗುರುತಿಸಲಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ (Anekal) ತಾಲೂಕಿನ ಹೆಬ್ಬಗೋಡಿ ಬಳಿ ಮಾ.31 ರಂದು ಯುಗಾದಿ ಹಬ್ಬದ ದಿನವೇ ಆರೋಪಿಗಳು ನೇಪಾಳಿ ಮಂಜನನ್ನು ಹತ್ಯೆ ಮಾಡಿದ್ದರು. ಇನ್ನೂ ನೇಪಾಳಿ ಮಂಜ ಆರೋಪಿಗಳ ಅಣ್ಣನಾದ ಮಹೇಶನ ಕೆನ್ನೆಗೆ ಹೊಡೆದಿದ್ದಕ್ಕೆ ಕೊಲೆ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಯುಗಾದಿಯಂದೇ ರೌಡಿಶೀಟರ್ ಬರ್ಬರ ಹತ್ಯೆ – ರೌಡಿಸಂ ಬಿಟ್ಟು ಊರು ಸೇರಿದ್ದ ನೇಪಾಳಿ ಮಂಜ!

ಹತ್ಯೆಗೀಡಾದ ಮಂಜ ಇಸ್ಪೀಟ್ ಆಡಲು ಮಹೇಶ್ ಬಳಿ 5,000 ರೂ. ಹಣ ಕೇಳಿದ್ದ. ನನ್ನ ಬಳಿ ಹಣ ಇಲ್ಲ ಎಂದು ಆತ ಹೇಳಿದ್ದಕ್ಕೆ ಮಂಜ ಕೆನ್ನೆಗೆ ಹೊಡೆದಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಹಲ್ಲೆಯ ವಿಚಾರ ತಿಳಿದು ಜಗ್ಗ ಸಿಟ್ಟಿಗೆದ್ದು, ನೇಪಾಳಿ ಮಂಜನನ್ನು ಮುಗಿಸಲು ಸಂಚು ರೂಪಿಸಿದ್ದ. ಪ್ಲ್ಯಾನ್‍ನಂತೆ ಆತ ಎಣ್ಣೆ ಪಾರ್ಟಿ ಮಾಡುವ ಸ್ಥಳಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು, ಪರಾರಿಯಾಗಿದ್ದರು.

ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಇದನ್ನೂ ಓದಿ: ಇನ್‌ಸ್ಟಾ ಲವ್ | ಎರಡನೇ ಮದುವೆಯಾದ ಪತ್ನಿ – ವಿಡಿಯೋ ನೋಡಿ ಮೊದಲ ಪತಿ ಶಾಕ್

Share This Article