2ನೇ ವಿಮಾನ ನಿಲ್ದಾಣಕ್ಕೆ ಬಿಡದಿಯಲ್ಲಿ 5,000 ಎಕ್ರೆ ಜಮೀನು ಕೊಟ್ರೆ ಆಗುತ್ತಾ? ಯಾರ ಒತ್ತಡ ಅನ್ನೋದು ಗೊತ್ತಿಲ್ಲ: ಪರಮೇಶ್ವರ್

Public TV
1 Min Read
G Parameshwar

ಬೆಂಗಳೂರು: 2ನೇ ವಿಮಾನ ನಿಲ್ದಾಣಕ್ಕೆ ಬಿಡದಿಯಲ್ಲಿ (Bidadi) 5,000 ಎಕ್ರೆ ಜಮೀನು ಕೊಟ್ರೆ ಆಗುತ್ತಾ? ಬೆಟ್ಟಗುಡ್ಡ ಇದ್ಯಾ? ಗಾಳಿ ಹೆಚ್ಚಾಗಿದ್ಯಾ ಅನ್ನೋದನ್ನು ನೋಡುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದರು.ಇದನ್ನೂ ಓದಿ: ಬಿಡದಿಯಲ್ಲಿ ವಿಮಾನ‌ ನಿಲ್ದಾಣ ಮಾಡ್ತಿಲ್ಲ, ಅಲ್ಲಿ ಶಿವಕುಮಾರ್ ಲೇಔಟ್ ಮಾಡ್ತಿದ್ದಾರೆ: ಎಂ.ಬಿ.ಪಾಟೀಲ್

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ನಿಗದಿ ವಿಚಾರದಲ್ಲಿ ನಾವು ಏನು ಹೇಳಬೇಕು ಅದನ್ನ ಹೇಳಿದ್ದೇವೆ. ಈ ಹಿಂದೆ ಬಿಡದಿಯಲ್ಲಿ ಆಗಲ್ಲ ಎಂದು ತಾಂತ್ರಿಕ ಸಮಿತಿ ಹೇಳಿತ್ತು. ಆಗ ದೇವನಹಳ್ಳಿಗೆ ಶಿಫ್ಟ್ ಮಾಡಿದ್ದೆವು. ಈಗ ಮತ್ತೆ ಬಿಡದಿ ಭಾಗದಲ್ಲಿ ಆಗುತ್ತಾ? ಇಲ್ಲವಾ? ಏನು ಹೇಳುತ್ತಾರೆ ಎನ್ನುವುದನ್ನು ನೋಡಬೇಕು. ತಾಂತ್ರಿಕವಾಗಿ ಸಮಸ್ಯೆಯಿದ್ದು, ಅದಕ್ಕೆ ಒತ್ತಡ ಹಾಕಿದರೆ ಬದಲಾವಣೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.

ಎರಡನೇ ವಿಮಾನ ನಿಲ್ದಾಣಕ್ಕೆ ನೆಲಮಂಗಲ, ಬಿಡದಿ ಎರಡು ಸ್ಥಳಗಳನ್ನ ಗುರುತಿಸಿದ್ದಾರೆ. ಟೆಕ್ನಿಕಲ್ ಕಮಿಟಿ ಏನು ರಿಪೋರ್ಟ್ ಕೊಡುತ್ತಾರೆ ನೋಡೋಣ. ಫಿಸಿಬಲಿಟಿ ರಿಪೋರ್ಟ್ ಕೊಟ್ಟ ಬಳಿಕ ಗೊತ್ತಾಗುತ್ತದೆ. ಯಾರ ಒತ್ತಡದ ಬಗ್ಗೆಯೂ ನನಗೆ ಗೊತ್ತಿಲ್ಲ. ಆದರೆ ಹಾಗೆ ಮಾಡಲು ಬರಲ್ಲ ಎಂದು ಹೇಳಿದರು.ಇದನ್ನೂ ಓದಿ: 64 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಎಐಸಿಸಿ ಅಧಿವೇಶನ – ಹಲವು ಮಹತ್ವದ ನಿರ್ಣಯ ಸಾಧ್ಯತೆ

Share This Article