ಬೆಂಗಳೂರು: ಡೊನಾಲ್ಡ್ ಟ್ರಂಪ್ (Donald Trump) ಪ್ರತಿಸುಂಕದ ಪ್ರಭಾವ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಇದರ ಮಧ್ಯೆ ಚಿನ್ನದ ದರ (Gold Rate) ಇಳಿಕೆಯಾಗಿದ್ದು, ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಶರವೇಗದಲ್ಲಿ ಚಿನ್ನದ ದರ ಏರಿಕೆ ಕಂಡಿತ್ತು. ಜನ ಸಾಮಾನ್ಯರು ಚಿನ್ನ ಮುಟ್ಟಿದ್ರೇ ಶಾಕ್ ಎಂಬ ಪರಿಸ್ಥಿತಿ ಉದ್ಭವವಾಗಿತ್ತು. ಆದರೀಗ ಟ್ರಂಪ್ ಸುಂಕ ನೀತಿಯಿಂದ ಚಿನ್ನದ ದರ ಇಳಿಕೆ ಕಂಡಿದೆ. ಇದನ್ನೂ ಓದಿ: ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ಸಂಪನ್ನ
ಎಷ್ಟು ದರ ಇಳಿಕೆ?
*ಚಿನ್ನದ ದರ ಕಳೆದ 3 ದಿನದಿಂದ ಇಳಿಯುತ್ತಿದೆ
*22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 8,285 ರೂಪಾಯಿ ಆಗಿದೆ.
*24 ಕ್ಯಾರೆಟ್ ಚಿನ್ನದ ದರ 9,038 ರೂಪಾಯಿ ಆಗಿದೆ.
*22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂ. ಕಡಿಮೆ ಆಗಿದೆ.
ಟ್ರಂಪ್ ಸುಂಕ ನೀತಿಯಿಂದ ಚಿನ್ನದ ದರ ದಿಢೀರ್ ಇಳಿಕೆ ಕಂಡಿದೆ. ಮುಂದಿನ ದಿನದಲ್ಲಿ ಪ್ರತಿ ಗ್ರಾಂಗೆ 7,500 ರೂ. ಆಗಬಹುದು ಎನ್ನುವ ಲೆಕ್ಕಾಚಾರ ವನ್ನು ತಜ್ಞರು ಮಾಡುತ್ತಿದ್ದಾರೆ. ಒಂದು ಲಕ್ಷದ ಗಡಿಗೆ ತಲುಪಿದ್ದ ಚಿನ್ನದ ದರ ಇಳಿಕೆ ಈಗ ಜನರಿಗೆ ಕೊಂಚ ರಿಲೀಫ್ ಮೂಡಿಸಿದೆ. ಇದನ್ನೂ ಓದಿ: ಆರ್‌ಸಿಬಿ ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ!