ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ- ಐಟಿ ನೋಟಿಸ್ ಬಗ್ಗೆ ಪೃಥ್ವಿರಾಜ್ ತಾಯಿ ಪ್ರತಿಕ್ರಿಯೆ

Public TV
1 Min Read
prithviraj sukumaran

ಮಾಲಿವುಡ್ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್‌ಗೆ (Prithviraj Sukumaran) 2022ರ ದಾಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ಕುರಿತು ಮಲ್ಲಿಕಾ ಸುಕುಮಾರನ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್‌ಕಮ್ ಟ್ಯಾಕ್ಸ್ ನೋಟಿಸ್‌ಗೆ ನಮಗೆ ಭಯವಿಲ್ಲ ಎಂದು ಪೃಥ್ವಿರಾಜ್ ತಾಯಿ ಮಲ್ಲಿಕಾ (Mallika Sukumaran) ಪ್ರತಿಕ್ರಿಯೆ ನೀಡಿದ್ದಾರೆ.

Prithviraj Sukumaran

ಮಾಧ್ಯಮವೊಂದಕ್ಕೆ ಪೃಥ್ವಿರಾಜ್ ತಾಯಿ ಮಲ್ಲಿಕಾ ಸುಕುಮಾರನ್ ಮಾತನಾಡಿ, ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಯಾವುದೇ ತನಿಖೆಗೂ ಹೆದರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ:L2: ಎಂಪುರಾನ್‌ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್‌ – ಸಂಭಾವನೆ ವಿವರ ನೀಡುವಂತೆ ಸೂಚನೆ

prithviraj sukumaran 1

ಅಂದಹಾಗೆ, ಡಿಸೆಂಬರ್ 2022ರಲ್ಲಿ ಮಲಯಾಳಂ ಚಿತ್ರರಂಗದ ಅನೇಕ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ತೆರಿಗೆ ವಂಚನೆ, ವಿದೇಶಗಳಲ್ಲಿನ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯನ್ನು ಅನೇಕರು ಮಾಡಿದ್ದಾರೆ ಎಂದು ದಾಳಿ ಮಾಡಿದ್ದ ಐಟಿ ಅಧಿಕಾರಿಗಳು ಪೃಥ್ವಿರಾಜ್ ಸುಕುಮಾರನ್ ಮನೆ ಮತ್ತು ಕಚೇರಿಯನ್ನು ಕೂಡ ಆಗ ಪರಿಶೀಲಿಸಿದ್ದರು. ಆ ತನಿಖೆಯ ಮುಂದುವರೆದ ಭಾಗವಾಗಿ ಈಗ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಐಟಿ ಇಲಾಖೆ ಇನ್ನೊಮ್ಮೆ ನೋಟಿಸ್ ಕಳುಹಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:ಎಂಪುರಾನ್‌ ನಿರ್ಮಾಪಕನಿಗೆ ಶಾಕ್‌ – ಚಿಟ್‌ ಫಂಡ್‌ ಕಚೇರಿ ಮೇಲೆ ಇಡಿ ದಾಳಿ

prithviraj sukumaran 1

ಇತ್ತೀಚೆಗಷ್ಟೇ ಎಂಪುರಾನ್ ಚಿತ್ರದ ಭಾರೀ ವಿವಾದಕ್ಕೀಡಾಗಿತ್ತು. ಗುಜರಾತ್ ಗಲಭೆಗೆ ಸಂಬಂಧಿಸಿದ ದೃಶ್ಯಗಳನ್ನು ತಿರುಚಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ 24 ದೃಶ್ಯಗಳಿಗೆ ಚಿತ್ರತಂಡ ಕತ್ತರಿ ಹಾಕಿತ್ತು.

Share This Article