– ಸದಾಶಿವನಗರ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ-ಪರಮೇಶ್ವರ್ ಭೇಟಿ
– 1 ಗಂಟೆಗಳ ಕಾಲ ಮಾತುಕತೆಯನ್ನ ಸೌಜನ್ಯದ ಭೇಟಿ ಎಂದ ಪರಂ
ಬೆಂಗಳೂರು: ವಿನಯ್ ಸೋಮಯ್ಯ(Vinay Somaiah) ಆತ್ಮಹತ್ಯೆ ಕೇಸ್ ಸಿಬಿಐಗೆ ವಹಿಸುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್(Parameshwar) ಹೇಳಿದರು.
ಬೆಂಗಳೂರಿನಲ್ಲಿ(Bengaluru) ಮಾತನಾಡಿದ ಅವರು, ಬಿಜೆಪಿ ಅವರು ಆಗ್ರಹ ಮಾಡುತ್ತಿದ್ದಾರೆ. ಈಗಾಗಲೇ ತನಿಖೆ ನಡೆಯುತ್ತಿದೆ. ಸಿಬಿಐಗೆ ಕೊಡುವ ಅಗತ್ಯ ಏನೂ ಕಾಣಿಸುತ್ತಿಲ್ಲ. ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಏನಾದರೂ ಲೋಪಗಳಾಗಿದ್ದರೆ ಗೊತ್ತಾಗುತ್ತದೆ. ಆಗ ಬೇರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಎನ್‌ಡಿಎ ಅವಧಿಯಲ್ಲೇ ತಮಿಳುನಾಡಿಗೆ 3 ಪಟ್ಟು ಹೆಚ್ಚಿನ ಅನುದಾನ ಸಿಕ್ಕಿದೆ – ಮೋದಿ
ಶಾಸಕರ ಹೆಸರನ್ನು ಬಿಜೆಪಿಯವರು(BJP) ಹೇಳುತ್ತಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರು ಬಿಟ್ಟಿದ್ದಾರೆ. ಡೆತ್‌ನೋಟ್‌ನಲ್ಲಿ ಶಾಸಕರ ಹೆಸರಿದೆ ಅಂತಿದ್ದಾರೆ. ಎಲ್ಲವನ್ನೂ ನೋಡುತ್ತೇವೆ. ಕಾನೂನು ಪ್ರಕಾರ ತನಿಖೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಸಮುದ್ರದಲ್ಲಿ ಪಾಕ್ ವ್ಯಕ್ತಿಗೆ ಎದುರಾದ ಸಂಕಷ್ಟ – 3 ಗಂಟೆ ಕಾಲ ಶಸ್ತ್ರಚಿಕಿತ್ಸೆ ನೀಡಿ ಜೀವ ಉಳಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿ
ಖರ್ಗೆ ಭೇಟಿಯಾದ ಪರಂ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ನಿವಾಸಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿದರು. ಸದಾಶಿವನಗರದ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಪರಮೇಶ್ವರ್ ಗಂಟೆಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಇತ್ತೀಚೆಗೆ ಪಕ್ಷದೊಳಗಿನ ವಿದ್ಯಮಾನದ ಬಗ್ಗೆ ತೀವ್ರ ಬೇಸರಗೊಂಡಿರುವ ಪರಮೇಶ್ವರ್, ಕರ್ನಾಟಕ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಸಂಬಂಧವೂ ಅಸಮಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಖರ್ಗೆ ಹಾಗೂ ಪರಮೇಶ್ವರ್ ಭೇಟಿ ಕುತೂಹಲ ಮೂಡಿಸಿದೆ.
ಇನ್ನೂ ಖರ್ಗೆ ಭೇಟಿ ಬಳಿಕ ಮಾತನಾಡಿದ ಅವರು, ನಮ್ಮದು ಒಂದೇ ಕುಟುಂಬ, ಸೌಜನ್ಯ ಭೇಟಿ. ನನಗೆ ಹಿರಿಯ ಅಣ್ಣ ಇದ್ದ ಹಾಗೆ. ನಾವು ರಾಜಕೀಯ ಏನು ಮಾತನಾಡಲ್ಲ. ನಾವು ರಾಜಕೀಯ ಮಾತೇ ಆಡಿಲ್ಲ ಅಂತ ಹೇಳ್ತಾ ಇದ್ದೇನೆ ಎಂದರು. ಇದನ್ನೂ ಓದಿ: ಮೈಸೂರು | ಕ್ಯಾತಮಾರನಹಳ್ಳಿ ವಿವಾದಿತ ಸ್ಥಳದಲ್ಲಿ ಮದರಸಾ ತೆರೆಯಲು ಡಿಸಿ ಅನುಮತಿ – ಗ್ರಾಮಸ್ಥರ ಆಕ್ರೋಶ
ಮಕ್ಕಳು, ಮರಿ ಎಲ್ಲರನ್ನೂ ಮಾತನಾಡಿಸುತ್ತಿದ್ದೆ. ಕುಟುಂಬದ ವಿಚಾರ ಚರ್ಚೆ ಮಾಡಿದ್ದೇವೆ ಅಷ್ಟೇ. ಆರೋಗ್ಯ ವಿಚಾರಿಸಿ ಕಾಫಿ ಕುಡಿದು ಬಂದಿದ್ದೇನೆ. ಅವರು ಏನು ರಾಜಕೀಯ ವಿಚಾರ ಕೇಳಿಲ್ಲ. ನಾನು ಮಾಹಿತಿಯೂ ಕೊಟ್ಟಿಲ್ಲ ಎಂದು ಹೇಳಿದರು. ಇದನ್ನೂ ಓದಿ: Raichur | ಗ್ರಾನೈಟ್ ಕ್ವಾರಿಯಲ್ಲಿ ಸಿಡಿಮದ್ದು ಸ್ಫೋಟ – ಓರ್ವ ಸಾವು, ಇನ್ನೋರ್ವ ಗಂಭೀರ
ರಾಜ್ಯದ ರಾಜಕೀಯದ ಬಗ್ಗೆ ಮಾಹಿತಿ ನೀಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಐಸಿಸಿ ಅಧ್ಯಕ್ಷರು ಅವರು, ಅವರದ್ದೇ ಆದ ಸೋರ್ಸ್ ಇವೆ. ಅದರ ಮೂಲಕ ಮಾಹಿತಿ ಪಡೆಯುತ್ತಿರುತ್ತಾರೆ ಎಂದರು.