ದೇಶದ ಜನತೆಗೆ ಶ್ರೀರಾಮನವಮಿ ಶುಭಾಶಯ ತಿಳಿಸಿದ ಮೋದಿ

Public TV
1 Min Read
ram navami pm modi

– ಪ್ರಭು ಶ್ರೀರಾಮನ ಆಶೀರ್ವಾದ ಯಾವಾಗಲೂ ನಮ್ಮ ಮೇಲಿರಲಿ: ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ದೇಶದ ಜನತೆಗೆ ಶ್ರೀರಾಮನವಮಿ (Ram Navami) ಶುಭಾಶಯ ತಿಳಿಸಿದ್ದಾರೆ. ಶ್ರೀರಾಮನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸಿದ್ದಾರೆ.

ಶ್ರೀರಾಮನವಮಿ ಹಿನ್ನೆಲೆಯಲ್ಲಿ ಎಕ್ಸ್‌ ಪೋಸ್ಟ್‌ ಹಾಕಿದ ಮೋದಿ, ಎಲ್ಲರಿಗೂ ರಾಮ ನವಮಿಯ ಶುಭಾಶಯಗಳು. ಪ್ರಭು ಶ್ರೀರಾಮನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಮತ್ತು ನಮ್ಮ ಎಲ್ಲಾ ಪ್ರಯತ್ನಗಳಲ್ಲಿ ನಮಗೆ ಮಾರ್ಗದರ್ಶನ ನೀಡಲಿ. ಇಂದು ತಡವಾಗಿ ರಾಮೇಶ್ವರಂನಲ್ಲಿ ಇರಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀ ರಾಮನವಮಿ ಇತಿಹಾಸ, ಆಚರಣೆಯ ಮಹತ್ವವೇನು?

ಪ್ರಧಾನಿಯವರು ಇಂದು ಮಧ್ಯಾಹ್ನ ತಮಿಳುನಾಡಿನ ರಾಮೇಶ್ವರಂಗೆ ಭೇಟಿ ನೀಡಲಿದ್ದು, ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ರಾಮೇಶ್ವರಂನಲ್ಲಿ ಮೋದಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು (ಹೊಸ ಪಂಬನ್ ರೈಲು ಸೇತುವೆ) ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 12:45 ರ ಸುಮಾರಿಗೆ ಅವರು ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಲಿದ್ದಾರೆ.

ಮಧ್ಯಾಹ್ನ 1:30 ರ ಸುಮಾರಿಗೆ ರಾಮೇಶ್ವರಂನಲ್ಲಿ ಅವರು ತಮಿಳುನಾಡಿನಲ್ಲಿ 8,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ರೈಲು ಮತ್ತು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ಆಧ್ಯಾತ್ಮಿಕ ಶಕ್ತಿ ನೀಡುವ ಶ್ರೀರಾಮ ದೇವಾಲಯಗಳಿವು…!

Share This Article