ಬೆಂಗಳೂರು: ಬಸ್ ಟಿಕೆಟ್, ಮೆಟ್ರೋ, ಹಾಲು, ವಿದ್ಯುತ್ ಬಳಿಕ ಡಿಸೇಲ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆನ್ನಲ್ಲೇ ಈಗ ಕಾಫಿ, ಟೀ ದರ ಸಹ ಏರಿಕೆಯಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಂದಿನಿ ಹಾಲಿನ ದರ ಬೆಲೆ ಪ್ರತಿ ಲೀ.ಗೆ 4 ರೂ. ಏರಿಕೆ ಮಾಡಿದ ಬೆನ್ನಲ್ಲೇ ಈಗ ಹೋಟೆಲ್‌ಗಳಲ್ಲಿ ಕಾಫಿ(Coffee), ಟೀ(Tea) ಬೆಲೆಯೂ ಏರಿಕೆಯಾಗಿದೆ. ಒಂದು ಕಡೆ ವಿಪಕ್ಷಗಳು ದರ ಏರಿಕೆ ವಿರುದ್ಧ ಮಾತಿನ ಸಮರ ನಡೆಸಿದ್ರೇ ಇನ್ನೊಂದು ಕಡೆ ಸರ್ಕಾರ ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಕೊಲ್ಲೂರಲ್ಲಿ ಚಂಡಿಕಾ ಹೋಮದಿಂದ ಸಂಗ್ರಹವಾಯ್ತು 1.77 ಕೋಟಿ ರೂ.
ಈಗ ಹಾಲಿನ ದರ ಲೀಟರ್‌ಗೆ 4 ರೂ. ಏರಿಕೆಯಾದ ಬೆನ್ನಲ್ಲೇ ಈಗ ಹೋಟೆಲ್‌ಗಳಲ್ಲಿ ಕಾಫಿ, ಟೀ ಬೆಲೆಯೂ ಏರಿಕೆಯಾಗಿದೆ. 2-3 ರೂ. ಏರಿಕೆ ಕಂಡಿದೆ. ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ ಟೀ ದರದ ಜೊತೆಗೆ ಶೀಘ್ರವೇ ಬೆಣ್ಣೆ, ತುಪ್ಪದ ದೋಸೆ ದರವೂ ಏರಿಕೆಯಾಗಲಿದೆ ಎಂದು ಹೋಟೆಲ್ ಅಸೋಸಿಯೇಷನ್(Hotel Association) ಹೇಳಿದೆ. ಇದನ್ನೂ ಓದಿ: ನನಗೆ ಶುಗರ್ ಇದೆ, ಅನ್ನ ಬಿಟ್ಟು ಚಪಾತಿ ತಿಂತಾ ಇದೀನಿ: ಸಿದ್ದರಾಮಯ್ಯ
ಇನ್ನೂ ದರ ಏರಿಕೆ ವಿಚಾರದಲ್ಲಿ ಸರ್ಕಾರವನ್ನು ಕಟುವಾಗಿ ಟೀಕಿಸಿರುವ ಹೆಚ್.ಡಿ.ಕುಮಾರಸ್ವಾಮಿ(H D Kumaraswamy) ಹಾಲಿನ ದುಡ್ಡು ರೈತರಿಗೆ ಮೊಸರಿನ ದುಡ್ಡು ಏನು ಮಾಡ್ತೀರಾ ಎಂದು ಕಿಡಿಕಾರಿದ್ದಾರೆ. ಆದರೆ ಸಚಿವ ಡಿ.ಕೆ.ಶಿವಕುಮಾರ್(D K Shivakumar) ದರ ಏರಿಕೆಯನ್ನು ಸಮರ್ಥಿಸಿದ್ದಾರೆ. ರಾಜಕೀಯ ಪಕ್ಷಗಳ ಕೆಸೆರೆರೆಚಾಟದ ಮಧ್ಯೆ ಜನರು ನಿತ್ಯ ದರ ಏರಿಕೆ ಬರೆಯಿಂದ ಹೈರಾಣಾಗಿದ್ದಾರೆ.