ಬೆಂಗಳೂರು: ಹನಿಟ್ರ್ಯಾಪ್ (Honey Trap) ವಿಚಾರದಲ್ಲಿ ಹಾಯ್ ಎಂದವರಿಗೆ ರಾಜಣ್ಣ (K.N Rajanna) ಅವರು ಹಾಯ್ ಎಂದಿರಬಹುದು ಎಂಬ ಅಚ್ಚರಿ ಹೇಳಿಕೆಯನ್ನು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ನಾವೇ ಎಲ್ಲರಿಂದ ಎಚ್ಚರವಾಗಿರಬೇಕಷ್ಟೇ. ಇದಕ್ಕೆಲ್ಲ ಇತಿಶ್ರೀ ಹಾಡಲೇಬೇಕು. ಹಾಯ್ ಅಂದ್ರೆ ಹಾಯ್ ಅನ್ನಬಾರದು ನಾವು. ಅವರು ಹಾಯ್ ಅಂದ್ರೆ ಬೈ ಬೈ ಅಂತ ಓಡಿ ಹೋಗಬೇಕಷ್ಟೇ. ರಾಜಣ್ಣ ಹಾಯ್ ಅಂದವ್ರಿಗೆ ಬೈ ಬೈ ಅಂದಿದ್ದಾರಂತೆ ನಮ್ಮ ಹತ್ತಿರ ಚರ್ಚೆ ಮಾಡಿದಾಗ ಹೇಳಿದ್ದರು ಎಂದಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾರು ಚರ್ಚೆ ಮಾಡಿಲ್ಲ: ಸತೀಶ್ ಜಾರಕಿಹೊಳಿ
ಅವರು ಹಾಯ್ ಅಂದವರಿಗೆ ಹಾಯ್ ಅಂದಿರಬಹುದು. ನಾವೆಲ್ಲರೂ ಹಾಯ್ ಅಂದ್ರೆ ಹಾಯ್ ಅನ್ನಬಾರದು ಅಷ್ಟೇ. ನಾವು ನೀವು ಎಲ್ಲರೂ ಎಚ್ಚರಿಕೆಯಿಂದ ಇರಬೇಕು. 300 ಕಿಮೀ ರೇಡಿಯಸ್‌ನಲ್ಲಿ ಎಲ್ಲಿ ಬೇಕಾದರು ಕನೆಕ್ಟ್ ಆಗಬಹುದು. ಅದಕ್ಕೆ ನಾವು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ರೇಸ್‌ನಲ್ಲಿಲ್ಲ – ಅಣ್ಣಾಮಲೈ ಸ್ಪಷ್ಟನೆ