ಲಂಡನ್‌ನಿಂದ ಮುಂಬೈಗೆ ಹೊರಟಿದ್ದ 250 ಪ್ರಯಾಣಿಕರಿದ್ದ ವಿಮಾನ ಟರ್ಕಿಯಲ್ಲಿ ಲಾಕ್‌

Public TV
1 Min Read
London To Mumbai flight

ನವದೆಹಲಿ: ಲಂಡನ್‌ನಿಂದ ಮುಂಬೈಗೆ (London-Mumbai Flight) ಹೊರಟಿದ್ದ 250 ಮಂದಿ ಪ್ರಯಾಣಿಕರಿದ್ದ ವಿಮಾನ ಟರ್ಕಿಯಲ್ಲಿ ಸಿಲುಕಿಕೊಂಡಿದೆ.

ಲಂಡನ್-ಮುಂಬೈ ವರ್ಜಿನ್ ಅಟ್ಲಾಂಟಿಕ್ ವಿಮಾನದಲ್ಲಿ 250 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅವರಲ್ಲಿ ಹಲವರು ಭಾರತೀಯರಿದ್ದರು. ತಾಂತ್ರಿಕ ಸಮಸ್ಯೆಯಿಂದ ಟರ್ಕಿಯ ದಿಯರ್‌ಬಕೀರ್ ವಿಮಾನ ನಿಲ್ದಾಣದಲ್ಲಿ 40 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದಾರೆ.

ನಮ್ಮ ಗ್ರಾಹಕರು, ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆ ನಮ್ಮ ಮೊದಲ ಆದ್ಯತೆಯಾಗಿದೆ. ಆದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ತಾಂತ್ರಿಕ ಸಮಸ್ಯೆ ಸರಿಪಡಿಸಿದ ನಂತರ ಏಪ್ರಿಲ್ 4 ರ ಶುಕ್ರವಾರ ಸ್ಥಳೀಯ ಕಾಲಮಾನ 12:00 ಕ್ಕೆ ದಿಯರ್‌ಬಕಿರ್ ವಿಮಾನ ನಿಲ್ದಾಣದಿಂದ ಮುಂಬೈಗೆ VS1358 ವಿಮಾನ ಪ್ರಯಾಣಿಸಲಿದೆ ಎಂದು ವರ್ಜಿನ್ ಅಟ್ಲಾಂಟಿಕ್ ವಕ್ತಾರರು ತಿಳಿಸಿದ್ದಾರೆ.

ಟರ್ಕಿಯಲ್ಲಿ ಪ್ರಯಾಣಿಕರಿಗೆ ರಾತ್ರಿಯ ಹೋಟೆಲ್ ವಸತಿ ಮತ್ತು ಉಪಾಹಾರಗಳನ್ನು ಒದಗಿಸಲಾಗುತ್ತಿದೆ. ತಾಂತ್ರಿಕ ಸಮಸ್ಯೆ ಬಗೆಹರಿಸುವ ಕೆಲಸ ನಡೆಯುತ್ತಿದೆ ಎಂದು ವರ್ಜಿನ್‌ ಅಟ್ಲಾಂಟಿಕ್‌ ಹೇಳಿದೆ.

ಸಿಲುಕಿರುವ ಪ್ರಯಾಣಿಕರು ಮತ್ತು ಅವರ ಕುಟುಂಬ ಸದಸ್ಯರು ಸಾಮಾಜಿಕ ಮಾಧ್ಯಮಗಳ ಮೂಲಕ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ 300 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಒಂದೇ ಶೌಚಾಲಯ ನೀಡಲಾಗಿದೆ ಎಂದು ಹಲವರು ದೂರು ನೀಡಿದ್ದಾರೆ.

Share This Article