ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ

Public TV
1 Min Read
Parliament clears Waqf Amendment Bill 128 Ayes 95 noes 0 abstentions Rajya Sabhas 12 hour showdown ends with Waqf Amendment Bills passage 1

ನವದೆಹಲಿ: ತೀವ್ರ ಗದ್ದಲ, ಜಟಾಪಟಿ, ಸುದೀರ್ಘ 12 ಗಂಟೆ ಚರ್ಚೆ ನಂತರ ಮಧ್ಯರಾತ್ರಿ ವಕ್ಫ್ ತಿದ್ದುಪಡಿ ಮಸೂದೆಗೆ ರಾಜ್ಯಸಭೆ (Rajya Sabha) ಅನುಮೋದನೆ ನೀಡಿದೆ. ಈ ಮೂಲಕ ವಕ್ಫ್‌ ಮಸೂದೆಯನ್ನು (Waqf Amendment Bill) ಸೋಲಿಸುತ್ತೇವೆ ಎಂದಿದ್ದ INDIA ಒಕ್ಕೂಟಕ್ಕೆ ಮುಖಭಂಗವಾಗಿದ್ದು ನಿರೀಕ್ಷೆಯಂತೆ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಮಸೂದೆಯನ್ನು ಪಾಸ್‌ ಮಾಡುವ ಮೂಲಕ ಮೋದಿ ಸರ್ಕಾರಕ್ಕೆ (Narendra Modi) ಗೆಲುವು ಸಿಕ್ಕಿದೆ.

ಮಧ್ಯರಾತ್ರಿ 2:30 ಕ್ಕೆ ನಡೆದ ಮತದಾನದಲ್ಲಿ ಮಸೂದೆ ಪರ 128, ವಿರುದ್ಧ 95 ಮತಗಳು ಬಿದ್ದವು. ಲೋಕಸಭೆ ಮತ್ತ ರಾಜ್ಯಸಭೆಯಲ್ಲಿ ಮಸೂದೆ ಪಾಸ್‌ ಆಗಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸಹಿ ಹಾಕಿದ ಬಳಿಕ ಅಧಿಕೃತವಾಗಿ ಉಮೀದ್‌ ಕಾಯ್ದೆ (UMEED Act – Unified Waqf Management, Empowerment, Efficiency and Development Act) ಜಾರಿಯಾಗಲಿದೆ. ಇದನ್ನೂ ಓದಿ: ದೇವಸ್ಥಾನ, ಕೆರೆ, ಕೃಷಿ ಭೂಮಿ ಸೇರಿ 5,970 ಸರ್ಕಾರಿ ಆಸ್ತಿಗಳನ್ನ ವಕ್ಫ್‌ ಆಸ್ತಿ ಎಂದು ಘೋಷಿಸಲಾಗಿದೆ – ಜೆ.ಪಿ ನಡ್ಡಾ ಕಳವಳ

ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿದ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್‌ ರಿಜಿಜು, ಸದುದ್ದೇಶದಿಂದ ತಂದಿರುವ ಮಸೂದೆಗೆ ಕಾಂಗ್ರೆಸ್ ಸೇರಿ ವಿಪಕ್ಷಗಳೆಲ್ಲಾ ಬೆಂಬಲ ನೀಡಬೇಕು. ಕಾನೂನುಗಳು ನ್ಯಾಯ ಇರಬೇಕೇ ಹೊರತು ಜಗಳ ಮಾಡಲು ಅಲ್ಲ, ವಕ್ಫ್ ಕೇವಲ ಮುಸ್ಲಿಮರ ಅಧೀನದಲ್ಲಿರಲಿದೆ. ಬೇರೆಯವರ ಹಸ್ತಕ್ಷೇಪ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ನನ್ನ ವಿರುದ್ಧದ ಆರೋಪ ಸಾಬೀತುಪಡಿಸಿದ್ರೆ ರಾಜೀನಾಮೆ, ಇಲ್ಲದಿದ್ರೆ ನೀವು ಕೊಡಿ – ಅನುರಾಗ್ ಠಾಕೂರ್‌ಗೆ ಖರ್ಗೆ ಸವಾಲು

ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬೇಕೆಂಬ ವಿರೋಧ ಪಕ್ಷದ ಬೇಡಿಕೆಯನ್ನು ಪುರಸ್ಕರಿಸಿದ್ದೇವೆ. 2013 ರಲ್ಲಿ ತಂದ ವಕ್ಫ್ ಮಸೂದೆಯನ್ನು ಎದುರಿಸಲು ರಚಿಸಲಾದ 13 ಸದಸ್ಯರ ಸಮಿತಿಗಿಂತ ಸಮಿತಿಯು 31 ಸದಸ್ಯರನ್ನು ಹೊಂದಿತ್ತು. 2013 ರ ಸಮಿತಿಯ 22 ಸಭೆಗಳಿಗೆ ಹೋಲಿಸಿದರೆ ಜಗದಾಂಬಿಕಾ ಪಾಲ್ ನೇತೃತ್ವದ ಜೆಪಿಸಿ 200 ಗಂಟೆಗಳ ಕಾಲ ಚರ್ಚಿಸಿದೆ ಮತ್ತು 36 ಸಭೆಗಳನ್ನು ನಡೆಸಿದೆ ಎಂದು ತಿಳಿಸಿದರು.

 

Share This Article