ಕನ್ನಡ, ಕನ್ನಡಿಗರಿಗಾಗಿ 2 ಕೋಟಿ ಈಡುಗಾಯಿ ಹೊಡೆಯಿರಿ: ವಾಟಾಳ್ ನಾಗರಾಜ್ ಕರೆ

Public TV
1 Min Read
VATAL 5

– ಏ.26 ರಂದು ರಾಜ್ಯಾದ್ಯಂತ ಈಡುಗಾಯಿ ಪ್ರತಿಭಟನೆ

ಉಡುಪಿ: ಕನ್ನಡ, ಕನ್ನಡಿಗರಿಗಾಗಿ 2 ಕೋಟಿ ಈಡುಗಾಯಿ ಹೊಡೆಯಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಕರೆ ನೀಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 26 ರಂದು ರಾಜ್ಯಾದ್ಯಂತ ಈಡುಗಾಯಿ ಪ್ರತಿಭಟನೆಗೆ ಕರೆ ನೀಡಿದರು. ರಾಜ್ಯಾದ್ಯಂತ 2 ಕೋಟಿ ಈಡುಗಾಯಿ ಹೊಡೀಬೇಕು. ಮಹದಾಯಿ, ಕಳಸಾ ಬಂಡೂರಿ, ಮೇಕೆದಾಟು, ಗ್ರೇಟರ್ ಬೆಂಗಳೂರು, ಸಮಗ್ರ ಕರ್ನಾಟಕದ ಬೇಡಿಕೆಗೆ ಆಗ್ರಹಿಸಿ ಇಡೀ ರಾಜ್ಯದಲ್ಲಿ ಈಡುಗಾಯಿ ಚಳುವಳಿ ಮೂಲಕ ಒತ್ತಾಯ ಮಾಡಬೇಕು ಎಂದು ತಿಳಿಸಿದ್ದಾರೆ.

ಮಸೀದಿ, ಹೋಟೆಲ್, ದೇವಸ್ಥಾನ, ಅಂಗಡಿ ಎಲ್ಲಿಯಾದರೂ ಕಾಯಿ ಒಡೀರಿ. ಈಡುಗಾಯಿ ಎಲ್ಲದಕ್ಕೂ ಬಳಸುವ ವಸ್ತು. ಅದರಲ್ಲೊಂದು ಶಕ್ತಿಯಿದೆ. ತೆಂಗಿನಕಾಯಿಗೆ 50 ರುಪಾಯಿ ಆದ್ರೂ ಪರವಾಗಿಲ್ಲ. ಒಂದು ಈಡುಗಾಯಿ ಹೊಡೆದರೆ ಆಕಾಶ ಏನು ಬಿದ್ದು ಹೋಗಲ್ಲ. ಎಲ್ಲ ಹೋರಾಟಕ್ಕೂ ಕನ್ನಡಿಗರು ಸಿದ್ಧ ಇರಬೇಕು. ನಾಡಿಗಾಗಿ, ಕನ್ನಡಕ್ಕಾಗಿ ಕಾಯಿ ಒಡೆಯೋಣ ಎಂದು ಕರೆ ಕೊಟ್ಟಿದ್ದಾರೆ.

ರಿಷಬ್ ಶೆಟ್ಟಿ ಶಿವಾಜಿ ಪಾತ್ರದ ವಿಚಾರವಾಗಿ ಮಾತನಾಡಿ, ಕಾಂತಾರ ಮಾಡಿದ ರಿಷಬ್ ಶೆಟ್ಟಿ ಅವರು ಶಿವಾಜಿ ಸಿನಿಮಾ ಮಾಡಬಾರದು. ಕಾಂತಾರಕ್ಕೆ ವ್ಯಾಪಕ ಪ್ರಶಂಸೆ, ಹಣ, ಗೌರವ ಬಂತು. ರಾಜ್ಯದಲ್ಲಿ ದೊಡ್ಡ ದೊಡ್ಡ ಮಹನೀಯರು ಸ್ವಾತಂತ್ರ‍್ಯ ಹೋರಾಟಗಾರರಿದ್ದಾರೆ. ಹೀಗಾಗಿ, ರಿಷಬ್ ಶಿವಾಜಿ ಪಾತ್ರ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

Share This Article