ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ

Public TV
1 Min Read
rashmika mandanna 2

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅನಿಮಲ್, ಪುಷ್ಪ 2, ಛಾವಾ ಈ 3 ಚಿತ್ರಗಳು ಬ್ಯಾಕ್ ಟು ಬ್ಯಾಕ್ ಸಕ್ಸಸ್ ಆದ ಖುಷಿಯಲ್ಲಿದ್ದಾರೆ. ಇದರ ನಡುವೆ ನಟಿಯ ಬರ್ತ್‌ಡೇ ಆಚರಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹುಟ್ಟುಹಬ್ಬದ ಬಗ್ಗೆ ಉತ್ಸುಕರಾಗಿರೋ ನಟಿ, ಇದೀಗ ನನಗೆ 29 ವರ್ಷ ಆಗ್ತಿದೆ ಎಂದರೆ ನಂಬೋಕೆ ಆಗ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಗೋಲ್ಡ್ ರಾಣಿಗೆ ಮತ್ತೆ ಶಾಕ್ ಕೊಟ್ಟ ಪತಿ – ವಿಚ್ಛೇದನಕ್ಕೆ ಅರ್ಜಿ

rashmika mandanna 1 1ನನ್ನ ಹುಟ್ಟುಹಬ್ಬದ ತಿಂಗಳು ಬಂದಿದೆ. ನಾನು ತುಂಬಾ ಎಕ್ಸೈಟ್ ಆಗಿದ್ದೇನೆ. ವಯಸ್ಸು ಆದಂತೆಲ್ಲ ನಿಮಗೆ ಹುಟ್ಟುಹಬ್ಬ ಆಚರಣೆ ಮಾಡುವ ಆಸಕ್ತಿ ಕಡಿಮೆ ಆಗುತ್ತದೆ ಎಂದು ಕೇಳಿದ್ದೇನೆ. ಆದರೆ ನನ್ನ ವಿಚಾರದಲ್ಲಿ ಹಾಗಾಗಿಲ್ಲ. ವಯಸ್ಸು ಜಾಸ್ತಿ ಆದಂತೆಲ್ಲ ನನಗೆ ಬರ್ತ್‌ಡೇ ಆಚರಣೆ ಮಾಡುವ ಉತ್ಸಾಹ ಜಾಸ್ತಿ ಆಗುತ್ತಿದೆ ಎಂದು ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಏ.16ಕ್ಕೆ ಕಾದಿದೆ ಕಿಚ್ಚನಿಂದ ಬಿಗ್‌ ಸರ್ಪ್ರೈಸ್-‌ ಸುದೀಪ್‌ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್‌ ಫಿದಾ

rashmika mandanna

ನಾನು ಈಗ 29ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂದು ನಂಬೋಕೆ ಆಗುತ್ತಿಲ್ಲ. ಖುಷಿಯಾಗಿ, ಆರೋಗ್ಯಕರವಾಗಿ, ಸುರಕ್ಷಿತವಾಗಿ ಇನ್ನೊಂದು ವರ್ಷ ಕಳೆದಿದ್ದೇನೆ. ಇದನ್ನು ಆಚರಿಸುವ ಸಮಯ ಎಂದು ರಶ್ಮಿಕಾ ಮಂದಣ್ಣ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಈಗಾಗಲೇ ನಟಿಗೆ ಬರ್ತ್‌ಡೇ (Birthday) ವಿಶ್ಸ್ ತಿಳಿಸಲು ಪ್ರಾರಂಭಿಸಿದ್ದಾರೆ.

rashmika mandanna 1 2

ಅಂದಹಾಗೆ, ಇದೇ ಏ.5ರಂದು ರಶ್ಮಿಕಾ ಮಂದಣ್ಣ 29ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಈಗಿನಿಂದಲೇ ಅಭಿಮಾನಿಗಳ ಕಡೆಯಿಂದ ನಟಿಯ ಬರ್ತ್‌ಡೇ ಸೆಲೆಬ್ರೇಶನ್‌ಗೆ ಜೋರಾಗಿ ತಯಾರಿ ನಡೆಯುತ್ತಿದೆ.

Share This Article