ನ್ಯಾಯಾಧೀಶರ ಮನೆಯಲ್ಲಿಯೇ 7 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

Public TV
1 Min Read
Bidar Judge House Theft

ಬೀದರ್: ನ್ಯಾಯಾಧೀಶರ ಮನೆಯಲ್ಲಿ 7 ಲಕ್ಷ ರೂ.ಗಿಂತಲೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬೀದರ್ (Bidar) ನಗರದ ಜನವಾಡ ರಸ್ತೆಯಲ್ಲಿರುವ (Janawad Road) ನ್ಯಾಯಾಧೀಶರ ವಸತಿ ಗೃಹದಲ್ಲಿ ನಡೆದಿದೆ.ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಯುವತಿಗೆ ಟಾರ್ಚರ್, ಕೊಲೆ ಯತ್ನ

ಬೀದರ್‌ನ 2ನೇ ಹೆಚ್ಚುವರಿ ಸಿವಿಲ್ ಮತ್ತು 2ನೇ ಜೆಎಂಎಫ್‌ಸಿ (JMFC) ನ್ಯಾಯಾಧೀಶರಾದ ಎಂ.ಡಿ.ಶೇಜ್ ಚೌಟಾಯಿ ವಸತಿ ಗೃಹದಲ್ಲಿ ಕಳ್ಳತನವಾಗಿದೆ. ಕುಟುಂಬದ ಸದಸ್ಯರೆಲ್ಲರು ಸೇರಿ ಕೊಪ್ಪಳಕ್ಕೆ ಹೋಗಿದ್ದಾಗ ಬರೋಬ್ಬರಿ 7,61,800 ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದು, ಪರಾರಿಯಾಗಿದ್ದಾರೆ. ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನ್ಯಾಯಾಧೀಶರು ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ (New Town Police Station) ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ಭಾರತದ ಗಡಿಯೊಳಗೆ ನುಗ್ಗಲು ಪಾಕ್ ಸೇನೆ ಯತ್ನ – ಭಾರತದಿಂದ ಪ್ರತಿದಾಳಿ

Share This Article