ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಲು ಭಾರತ ನಿರ್ಧರಿಸಿದೆ: ಟ್ರಂಪ್‌

Public TV
2 Min Read
Donald Trump 2

– ನಾಳೆ ಪರಸ್ಪರ ಸುಂಕ ನೀತಿ ಘೋಷಿಸಲಿರುವ ಅಮೆರಿಕ ಅಧ್ಯಕ್ಷ

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಾಳೆ ಹೊಸ ಪರಸ್ಪರ ಸುಂಕ ನೀತಿಯನ್ನು (ರೆಸಿಪ್ರೊಕಲ್ ಟ್ಯಾರಿಫ್ ಪಾಲಿಸಿ) ಘೋಷಣೆ ಮಾಡಲಿದ್ದಾರೆ. ಈ ಹೊಸ ನೀತಿಯ ಪ್ರಕಾರ, ಅಮೆರಿಕದ ಉತ್ಪನ್ನಗಳ ಮೇಲೆ ಯಾವ ದೇಶವು ಎಷ್ಟು ಶೇಕಡಾ ಸುಂಕವನ್ನು ವಿಧಿಸುತ್ತದೆಯೋ, ಅದೇ ಪ್ರಮಾಣದಲ್ಲಿ ಆ ದೇಶದ ಆಮದುಗಳ ಮೇಲೆ ಅಮೆರಿಕವು (US) ಸುಂಕ ವಿಧಿಸಲಿದೆ.

ಈ ಪರಸ್ಪರ ಸುಂಕ (Tarrif) ವ್ಯವಸ್ಥೆಯು ಚೀನಾ, ಕೆನಡಾ, ಮೆಕ್ಸಿಕೊ ಮತ್ತು ಯುರೋಪಿಯನ್ ಯೂನಿಯನ್‌ನಂತಹ ಪ್ರಮುಖ ವ್ಯಾಪಾರ ಪಾಲುದಾರರನ್ನು ಗುರಿಯಾಗಿಸಲಿದೆ. ಇದರ ಜೊತೆಗೆ, ತೆರಿಗೆ ಸಂಗ್ರಹಣೆಯಲ್ಲಿ ಇತರ ಅಂಶಗಳಾದ ಮೌಲ್ಯವರ್ಧಿತ ತೆರಿಗೆ (VAT), ಸಬ್ಸಿಡಿಗಳು, ಮತ್ತು ವಿನಿಮಯ ದರಗಳನ್ನೂ ಪರಿಗಣಿಸಲಾಗುತ್ತಿದೆ. ಇದನ್ನೂ ಓದಿ: ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್‌ – ದೈತ್ಯ ಮಿಸೈಲ್‌ ಸಿದ್ಧಪಡಿಸಿದ ಇರಾನ್‌

narendra modi trump

ಈಗಾಗಲೇ ಟ್ರಂಪ್ ಮಾರ್ಚ್‌ನಲ್ಲಿ ಚೀನಾದಿಂದ ಆಮದಾಗುವ ಎಲ್ಲಾ ಸರಕುಗಳ ಮೇಲೆ 20% ಸುಂಕವನ್ನು ವಿಧಿಸಿದ್ದಾರೆ. ಕೆನಡಾ ಹಾಗೂ ಮೆಕ್ಸಿಕೊದಿಂದ ಆಮದಾಗುವ ಹೆಚ್ಚಿನ ಸರಕುಗಳ ಮೇಲೆ 25% ಸುಂಕವನ್ನು ಘೋಷಿಸಿದ್ದಾರೆ. ಆದರೆ USMCA-ಅನುಗುಣವಾದ ಸರಕುಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ. ಏಪ್ರಿಲ್ 2 ರಿಂದ ಈ ತೆರಿಗೆಗಳು ಎಲ್ಲಾ ದೇಶಗಳಿಗೆ ವಿಸ್ತರಿಸಲ್ಪಡಲಿದೆ.

ಈ ಬಗ್ಗೆ ಮಾತನಾಡಿರುವ ಟ್ರಂಪ್, ಏ.2 ರಿಂದ ನಾವು ಎಲ್ಲಾ ದೇಶಗಳೊಂದಿಗೆ ಪರಸ್ಪರ ಸುಂಕಗಳನ್ನು ಪ್ರಾರಂಭಿಸುತ್ತೇವೆ. ಇದು ಎಲ್ಲರಿಗೂ ಸಮಾನವಾಗಿ ಇರುತ್ತದೆ. ತೀವ್ರ ವ್ಯಾಪಾರ ಅಸಮತೋಲನ ಹೊಂದಿರುವ 15 ದೇಶಗಳು ಮೇಲೆ ಮಾತ್ರ ಗಮನ ಹರಿಸದೇ ಎಲ್ಲಾ ವ್ಯಾಪಾರ ಪಾಲುದಾರರನ್ನು ಗುರಿಯಾಗಿಸುವ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ

ನಾವು ತುಂಬಾ ಒಳ್ಳೆಯವರಾಗಿರುತ್ತೇವೆ. ತುಲನಾತ್ಮಕವಾಗಿ ಹೇಳುವುದಾದರೆ, ನಾವು ತುಂಬಾ ದಯೆಯಿಂದ ಇರುತ್ತೇವೆ. ನೀವು ಎರಡು ದಿನಗಳಲ್ಲಿ ನೋಡಲಿದ್ದೀರಿ. ಅದು ಬಹುಶಃ ನಾಳೆ ರಾತ್ರಿ ಅಥವಾ ಬಹುಶಃ ಬುಧವಾರ ಆಗಿರಬಹುದು. ಏಪ್ರಿಲ್ 2 ರ ಪರಸ್ಪರ ಸುಂಕದ ಗಡುವಿಗೆ ಮುಂಚಿತವಾಗಿ ಭಾರತವು ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Share This Article