ಬೆಂಗ್ಳೂರು ಸೇರಿದಂತೆ ದೇಶದ ವಿವಿಧೆಡೆ ವಕ್ಫ್‌ ಬಿಲ್‌ಗೆ ವಿರೋಧ – ಕಪ್ಪು ಪಟ್ಟಿ ಧರಿಸಿ ರಂಜಾನ್‌ ಪ್ರಾರ್ಥನೆ

Public TV
1 Min Read
Zameer Ahmed Ramadhan

ಬೆಂಗಳೂರು/ಭೋಪಾಲ್‌: ದೇಶಾದ್ಯಂತ ಮುಸ್ಲಿಂ (Muslim) ಬಾಂಧವರು ಪವಿತ್ರ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳ ಉಪವಾಸ ಅಂತ್ಯಗೊಂಡಿದ್ದು, ಇಂದು ಪವಿತ್ರ ರಂಜಾನ್‌ ಹಬ್ಬ ಆಚರಿಸುತ್ತಿದ್ದಾರೆ. ಹೊಸ ಉಡುಪು ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ನಡುವೆ ವಕ್ಫ್‌ ತಿದ್ದುಪಡಿ ಮಸೂದೆ (waqf amendment bill) ವಿರೋಧಿಸಿ ಈದ್-ಉಲ್-ಫಿತ್ ವಿಶೇಷ ಪ್ರಾರ್ಥನೆ ಸಂದರ್ಭ ಕೈಗಳಿಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ಮಾಡಲಾಗುತ್ತಿದೆ.

Zameer Ahmed Ramadhan 3

ಬೆಂಗಳೂರು (Bengaluru), ಭೋಪಾಲ್‌ ಸೇರಿದಂತೆ ದೇಶದ ವಿವಿಧೆಡೆ ಮಸೂದೆ ವಿರೋಧಿಸಿ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ ಮಾಡುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮನವಿ ಮಾಡಿತ್ತು. ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ದೊಡ್ಡ ಹಬ್ಬ ರಂಜಾನ್‌ ಈದ್‌ – ಯಾಕೆ ಆಚರಿಸುತ್ತಾರೆ? ಮಹತ್ವ ಏನು?

Zameer Ahmed Ramadhan 2

ಬೆಂಗಳೂರಿನಲ್ಲಿಯೂ ಸಹ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಮೌಲಾನಾ ಮಕ್ಸುದ್ ಇಮ್ರಾನ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಪಾರ್ಥನೆ ವೇಳೆ ಬಲಗೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುಗಾದಿ ʼಹೊಸತೊಡಕುʼ ಘಮಲು – ಮಾಂಸದ್ದೇ ಕಾರುಬಾರು

ಕಳೆದ ವರ್ಷದ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಿದ ʻವಕ್ಫ್‌ ತಿದ್ದುಪಡಿ ಮಸೂದೆʼ ಮಸೂದೆಯು ವಕ್ಫ್‌ ಆಸ್ತಿಗಳ ನಿರ್ವಹಣೆಯಲ್ಲಿ ಆಧುನಿಕತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲಿದೆ ಎಂದು ಆಡಳಿತರೂಢ ಬಿಜೆಪಿ ಪ್ರತಿಪಾದಿಸಿದೆ. ಆದರೆ, ವಿಪಕ್ಷಗಳು ಇದನ್ನು ಮುಸ್ಲಿಂ ಸಮುದಾಯದ ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿ ಮತ್ತು ವಕ್ಫ್‌ ಮಂಡಳಿಗಳ ಕಾರ್ಯನಿರ್ವಹಣೆಯಲ್ಲಿನ ಹಸ್ತಕ್ಷೇಪ ಎಂದು ಹರಿಹಾಯ್ದಿವೆ. ಇದನ್ನೂ ಓದಿ: ಯುಗಾದಿಯಂದೇ ರೌಡಿಶೀಟರ್ ಬರ್ಬರ ಹತ್ಯೆ – ರೌಡಿಸಂ ಬಿಟ್ಟು ಊರು ಸೇರಿದ್ದ ನೇಪಾಳಿ ಮಂಜ!

Share This Article