ಮೈಸೂರಿನಲ್ಲಿ ಯು ಡಿಜಿಟಲ್ ಐದನೇ ವರ್ಷದ ವಾರ್ಷಿಕೋತ್ಸವ

Public TV
1 Min Read
U Digital H.R.Ranganath

– ತಂತ್ರಜ್ಞಾನದ ಪರಿಣಾಮ ಕೇಬಲ್‌ ಬಿಸಿನೆಸ್‌ ಉಳಿದುಕೊಳ್ಳುವ ಸಾಧ್ಯತೆ ಕಡಿಮೆ ಇದೆ: ಹೆಚ್‌.ಆರ್‌.ರಂಗನಾಥ್‌

ಮೈಸೂರು: ಮೈಸೂರಿನಲ್ಲಿ ಯು ಡಿಜಿಟಲ್ ಐದನೇ ವರ್ಷದ ವಾರ್ಷಿಕೋತ್ಸವ ನಡೆಯಿತು.

ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್.ಆರ್. ರಂಗನಾಥ್, ಶಾಸಕರಾದ ಗಾಣಿಗ ರವಿ, ಹರೀಶ್ ಗೌಡ, ಪತ್ರಕರ್ತ ರವಿಕುಮಾರ್, ಯು ಡಿಜಿಟಲ್ ಮುಖ್ಯಸ್ಥ ಮಂಜುನಾಥ್ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಹೆಚ್.ಆರ್. ರಂಗನಾಥ್, ಟಿವಿ ವಾಹಿನಿಗಳ ತಂತ್ರಜ್ಞಾನ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ಕೇಬಲ್ ವ್ಯವಹಾರದಲ್ಲೂ ಬಹಳಷ್ಟು ಬದಲಾವಣೆಗಳು ಆಗಿವೆ. ಕೇಬಲ್ ಆಪರೇಟರ್‌ಗಳು ಕೇಬಲ್ ಬಿಸಿನೆಸ್‌ನಿಂದಲೇ ಜೀವನ‌ ಮಾಡ್ತಾ ಇದ್ದರು. ಈಗ ಆ ಪರಿಸ್ಥಿತಿ ಕೇಬಲ್ ಬಿಸಿನೆಸ್‌ನಲ್ಲೂ ಇಲ್ಲ. ತಂತ್ರಜ್ಞಾನದ ಪರಿಣಾಮ ಕೇಬಲ್‌ ಬಿಸಿನೆಸ್ ಉಳಿದುಕೊಳ್ಳುವ ಸಾಧ್ಯತೆಯೂ ಕಡಿಮೆ ಇದೆ. ದೊಡ್ಡ ಮಟ್ಟದ ಆತ್ಮಾವಲೋಕನ ಮಾಡಿಕೊಳ್ಳವ ಸಂದರ್ಭ ಈಗ ಬಂದಿದೆ ಎಂದರು.

ಮುಂದಿನ ವರ್ಷ ಈ ಬಿಸಿನೆಸ್‌ ಕಷ್ಟಕ್ಕೆ ಸಿಲುಕಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದಾಗ. ಮುಂದಿನ ವರ್ಷಗಳಲ್ಲಿ ಕೇಬಲ್‌ ಬಿಸಿನೆಸ್‌ ತಂತ್ರಜ್ಞಾನದ ಪರಿಣಾಮವಾಗಿ ಸಿಲುಕಬಹುದು ಅಂತ ಇದ್ದಾಗ. ಯು ಡಿಜಿಟಲ್‌ ಬಿಸಿನೆಸ್‌ಗಳು ಉಳಿದುಕೊಳ್ಳಬೇಕು. ಇದರ ಜೊತೆ ನಾವು ನಿಲ್ಲಬೇಕು. ಆಗ ವಾರ್ಷಿಕೋತ್ಸವಗಳು ನಡೆಯಬಹುದು. ಇಲ್ಲ ಅಂದ್ರೆ ನಡೆಯಲ್ಲ ಎಂದು ತಿಳಿಸಿದರು.

Share This Article